ಈ ವಾರ ವೀಕೆಂಡ್ ವಿತ್ ರಮೇಶ್ ಜತೆ ಇನ್ಫೋಸಿಸ್’ನ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಬೆಂಗಳೂರು, ಮೇ 15, 2019 (..): ಝೀ ಕನ್ನದ ಚಾನೆಲ್ ನಲ್ಲಿ ಈ ವಾರ ವೀಕೆಂಡ್ ವಿತ್ ರಮೇಶ್ ಭರ್ಜರಿಯಾಗಿರಲಿದೆ. ಸಾಧಕರ ಸೀಟ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಕುಳಿತುಕೊಳ್ಳಲಿದ್ದಾರೆ. ಈ ಮೂಲಕ ಮೂರ್ತಿ ದಂಪತಿ ತಮ್ಮ ಜೀವನಾನುಭವ ಹಂಚಿಕೊಳ್ಳಲಿದ್ದಾರೆ. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್ ಗೆ ಆಗಮಿಸುತ್ತಿರುವುದನ್ನು ಜೀ ವಾಹಿನಿ ತನ್ನ ಅಧಿಕೃತ ಪೇಜ್ ನಲ್ಲಿ ಪ್ರಕಟ ಮಾಡಿದೆ.