ದೇಹದ ತೂಕ ಕಡಿಮೆ ಮಾಡಲು ಅಭಿಮಾನಿಗಳ ಸಲಹೆ ನೀಡಿದ ಶಿಲ್ಪಾ ಶೆಟ್ಟಿ ಬೆಂಗಳೂರು, ಮೇ 14, 2019 (..):ಶಿಲ್ಪಾ ಶೆಟ್ಟಿ ಕೋಕಂನ ಆರೋಗ್ಯಕರ ಪಾನಿಯವೊಂದನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಬೇಸಿಗೆ ಬಿಸಿಲಿಗೆ ಈ ಪಾನೀಯ ಬೆಸ್ಟ್. ಹಾಗೆ ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ. ಹೊಟ್ಟೆ ಸಮಸ್ಯೆ ದೂರ ಮಾಡಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಎಂದು ಸಲಹೆ ನೀಡಿದ್ದಾರೆ. ಕೋಕಂನ ಈ ಪಾನೀಯದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಎಂಟಿಆಕ್ಸಿಡೆಂಟ್ಸ್ ಇರುತ್ತದೆ. ಇದು ತೂಕ ಕಡಿಮೆ ಮಾಡಲು ನೆರವಾಗುತ್ತದೆ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಇದು ಎಸಿಡಿಟಿ ದೂರ ಮಾಡುವ ಕೆಲಸವನ್ನೂ ಮಾಡುತ್ತದೆ ಎಂದು ಶಿಲ್ಪಾ ಹೇಳಿದ್ದಾರೆ. ಮಹಿಳೆಯರಿಗೆ ಈ ಪಾನೀಯ ತುಂಬಾ ಇಷ್ಟವಾಗಲಿದೆ ಎಂದೂ ಶಿಲ್ಪಾ ಹೇಳಿದ್ದಾರೆ.