:ಜೋಪಡಿಯಲ್ಲಿ ವಾಸ, ಬ್ಯಾಂಕ್‌ ಖಾತೆಯಲ್ಲಿ ಮಾತ್ರ ಕೋಟಿ..ಕೋಟಿ ರೂ…! ಮೈಸೂರು, ಜ.೩೦, ೨೦೨೪ : (̤̤ ̤ ) ;ಕರ್ನಾಟಕಮತ್ತುಕೇರಳದವಾಣಿಜ್ಯತೆರಿಗೆಅಧಿಕಾರಿಗಳು ಕೆಲ ದಿನಗಳ ಹಿಂದಷ್ಟೆ ಮೈಸೂರಲ್ಲಿ ನಡೆಸಿದಜಂಟಿಕಾರ್ಯಾಚರಣೆ ವೇಳೆ ಕೆಲ ಬೆಚ್ಚಿ ಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ನಕಲಿತೆರಿಗೆಇನ್‌ವಾಯ್ಸ್ಮತ್ತುನಕಲಿಇನ್‌ಪುಟ್ಟ್ಯಾಕ್ಸ್ಕ್ರೆಡಿಟ್(ಐಟಿಸಿ)ಸೃಷ್ಟಿಯಲ್ಲಿತೊಡಗಿರುವ100ಕ್ಕೂಹೆಚ್ಚುನಕಲಿಸಂಸ್ಥೆಗಳನ್ನುಒಳಗೊಂಡದೊಡ್ಡಪ್ರಮಾಣದವಂಚನೆಯನ್ನುಈ ಕಾರ್ಯಚರಣೆ ಬಹಿರಂಗ ಪಡಿಸಿತ್ತು. ಕಾರ್ಯಚರಣೆ ವೇಳೆ ಪತ್ತೆಯಾದ ಪ್ರಮುಖ ಅಂಶವೆಂದರೆ, ಜಿಎಸ್ಟಿ ವಂಚನೆ ಪ್ರಕರಣದ ಕಿಂಗ್‌ ಪಿನ್‌ ಮಹಮ್ಮದ್‌ ಸಿದ್ದಿಕ್ಕಿಯ ಬಲೆಗೆ ಸಿಲುಕಿದ ಬಹುತೇಕರು ಅಲ್ಪಸಂಖ್ಯಾತ ಸಮುದಾಯದ ಅಮಾಯಕರು. ಇವರ ಬಡತನ ಹಾಗೂ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಈ ವಂಚನೆ ಜಾಲವನ್ನು ಎಣೆದಿರುವುದು ಸ್ಪಷ್ಟ. ಜಸ್ಟ್‌ ಕನ್ನಡಗೆ ಲಭಿಸಿದ ಮಾಹಿತಿ ಪ್ರಕಾರ, ಚಿಂದಿ ಆಯುವ ವ್ಯಕ್ತಿ, ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿಗಳ ಬ್ಯಾಂಕ್‌ ಖಾತೆಯಲ್ಲಿ ಕೋಟಿಗಟ್ಟಲೇ ಹಣ ಜಮಾಗೊಂಡಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇವರನ್ನು ವಿಚಾರಣೆಗೆ ಒಳಪಡಿಸಿದಾಗ, ಖಾತೆಯಲ್ಲಿ ಇಷ್ಟೊಂದು ಬೃಹತ್‌ ಮೊತ್ತದ ಹಣ ಜಮಾಗೊಂಡಿರುವುದೇ ಅವರಿಗೆ ಅರಿವಿಲ್ಲ. ಈ ಅಮಾಯಕರ ದಾಖಲೆಗಳನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಹಣದ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಶಂಕೆ ಅಧಿಕಾರಿಗಳದ್ದು. ದಾಖಲೆಗಳಲ್ಲಿನ ಮಾಹಿತಿ ಪ್ರಕಾರ ವ್ಯಕ್ತಿಗಳನ್ನು ಕರೆಸಿ ವಿಚಾರಣೆಗೊಳಪಡಿಸಿದಾಗ ಅವರು ನಡೆಸುತ್ತಿದ್ದ ಕೆಲಸಕ್ಕೂ, ಬ್ಯಾಂಕಿನಲ್ಲಿ ಜಮೆಗೊಂಡ ಹಣಕ್ಕೂ ಸಂಬಂಧವೇ ಇರಲಿಲ್ಲ. ಚಿಂದಿ ಆಯುತ್ತಿದ್ದ ವ್ಯಕ್ತಿ, ಬೀಡಿ ಕಟ್ಟುವ ಮಹಿಳೆ, ಖಾಸಗಿ ಕಂಪನಿಯ ರೆಪ್‌, ಇ ಕಾಮರ್ಸ್‌ ನ ಸಿಬ್ಬಂದಿಗಳು ಸಹ ಈ ವಂಚನೆ ಜಾಲದಲ್ಲಿ ಸಿಲುಕಿರುವ ಅಮಾಯಕರು. ವಿಪರ್ಯಾಸವೆಂದರೆ ಬ್ಯಾಂಕುಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಬ್ಯೂಸಿನೆಸ್‌ ಕರೆಸ್ಪಾಂಡೆಂಟ್‌ ಸಹ ಈ ಜಾಲದಲ್ಲಿ ಸಿಲುಕಿದ್ದಾರೆ. ತಮ್ಮ ಬ್ಯಾಂಕ್‌ ಖಾತೆಯಲ್ಲಿ ಹಣ ಜಮೆಗೊಂಡಿರುವುದು ಬಳಿಕ ಡ್ರಾ ಮಾಡಿಕೊಂಡಿರುವ ಬಗೆಗೂ ಅವರಿಗೆ ಮಾಹಿತಿ ಇಲ್ಲ, ವಂಚನೆ ಜಾಲದಲ್ಲಿ ಸಿಲುಕಿದವರ ವಿಚಾರಣೆ ವೇಳೆ ಅವರ ವಾಸಸ್ಥಳಕ್ಕೆ ತೆರಳಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಹತ್ತು ಬೈ ಹತ್ತು ಅಳತೆ ನಿವೇಶನದಲ್ಲಿ ಕೆಲವರು, ಜೋಪಡಿ, ಮುರಿದ ಮನೆಗಳಲ್ಲಿ ಮತ್ತೆ ಕೆಲವರು, ಬಾಡಿಗೆ ಮನೆಲ್ಲಿ ಉಳಿದವರು ವಾಸಿಸುತ್ತಿದ್ದರು. ಬಹುರಾಜ್ಯಜಿಎಸ್‌ಟಿವಂಚನೆಯಮಾಸ್ಟರ್ಮೈಂಡ್ಮಹಮ್ಮದ್ಸಿದ್ದಿಕ್(ಕೇವಲ ೨೮ ವರ್ಷ್ಳು..!)ಎಂಬಾತನನ್ನುಮೈಸೂರಿನಲ್ಲಿಬಂಧಿಸಲಾಗಿದೆ.ನಕಲಿದಾಖಲೆಗಳಮೂಲಕನಕಲಿಜಿಎಸ್ಟಿನೋಂದಣಿಗಳನ್ನುಪಡೆದಮತ್ತುಕೇರಳ,ತಮಿಳುನಾಡುಮತ್ತುಕರ್ನಾಟಕದಾದ್ಯಂತಸ್ಕ್ರ್ಯಾಪ್ವ್ಯವಹಾರವನ್ನುನಡೆಸಿದ್ದಕ್ಕೆಸಂಬಂಧಿಸಿದಆರೋಪ ಆತನ ಮೇಲಿದೆ. ನಕಲಿತೆರಿಗೆಇನ್‌ವಾಯ್ಸ್‌ಗಳನ್ನು ಸಿದ್ಧಪಡಿಸುವಲ್ಲಿಸಿದ್ದಿಕ್ಕಿಪ್ರಮುಖಪಾತ್ರಧಾರಿ.ಆರಂಭಿಕವಹಿವಾಟಿನನಂತರಆಯಾಸರ್ಕಾರಗಳಿಗೆಅನುಗುಣವಾದತೆರಿಗೆಗಳನ್ನುಪಾವತಿಸದೆಐಟಿಸಿಯನಕಲಿಕ್ಲೈಮ್‌ಗಳನ್ನುಮಾಡಲುಡೀಲರ್‌ಗಳಿಗೆಅವಕಾಶಮಾಡಿಕೊಟ್ಟಿದ್ದ. ಮೈಸೂರಲ್ಲಿ ಮಾತ್ರವಲ್ಲದೆ ನೆರೆ ರಾಜ್ಯ ಕೇರಳದಲ್ಲೂ ವಂಚನೆ ಜಾಲ ವ್ಯಾಪಿಸಿದ್ದ. ನಕಲಿ ಸಂಸ್ಥೆಗಳನ್ನು ಆರಂಭಿಸುವ ಸಲುವಾಗಿ ಈ ಜಾಲ ವಿಸ್ತರಿಸಿದ್ದ. ಈ ಸಂಬಂಧ ಅಗತ್ಯ ದಾಖಲೆಗಳನ್ನು ಕೆಎಸಾರ್ಟಿಸಿ ಬಸ್‌ ನಿರ್ವಾಹಕನ ಮೂಲಕವೇ ನಡೆಸುತ್ತಿದ್ದ. ಕಾರ್ಯಚರಣೆ ವೇಳೆ ಈ ಅಂಶ ಪತ್ತೆ ಹಚ್ಚಿದ ಅಧಿಕಾರಿಗಳು, ಕಂಡಕ್ಟರ್‌ ನನ್ನು ಸಹ ವಿಚಾರಣೆಗೆ ಒಳಪಡಿಸಿ ಆತನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಬ್ಯಾಂಕ್‌ ಖಾತೆಯಲ್ಲಿ ಕೋಟಿ ಹಣ ಜಮಾ ವಾಣಿಜ್ಯತೆರಿಗೆಗಳಜಂಟಿಆಯುಕ್ತರನೇತೃತ್ವದ ೧೦೦ಕ್ಕೂ ಹೆಚ್ಚು ಮಂದಿಯಿದ್ದತನಿಖಾತಂಡ ಕಾರ್ಯಚರಣೆ ನಡೆಸಿ,ಮೈಸೂರು,ಮಂಗಳೂರುಮತ್ತುಕೇರಳದಲ್ಲಿಕೆಲವುವ್ಯಾಪಾರಿಗಳುನಡೆಸುತ್ತಿದ್ದವ್ಯವಸ್ಥಿತಕಾರ್ಯವನ್ನುಬಿಚ್ಚಿಟ್ಟಿದೆ. ಈವಂಚನೆಯಸಂಸ್ಥೆಗಳುವಾಸ್ತವವಾಗಿಯಾವುದೇಸರಕುಗಳನ್ನುತಲುಪಿಸದೆತೆರಿಗೆಇನ್‌ವಾಯ್ಸ್‌ಗಳನ್ನುನೀಡುತ್ತಿದ್ದದ್ದು ವಾಣಿಜ್ಯತೆರಿಗೆಇಲಾಖೆಕಾರ್ಯಚರಣೆ ವೇಳೆ ಪತ್ತೆಯಾಗಿವೆ. ಈಬೋಗಸ್ಸಂಸ್ಥೆಗಳುಒಟ್ಟಾರೆಯಾಗಿನಕಲಿಇನ್‌ವಾಯ್ಸ್‌ಗಳನ್ನುನೀಡಿದ್ದು,ಇದು ಒಟ್ಟುಒಂದು ಸಾವಿರ ಕೋಟಿ ರೂ. ಗೂ ಅಧಿಕ. ನೂರಾರು ಕೋಟಿ ರೂ. ಅಕ್ರಮಇನ್‌ಪುಟ್ಟ್ಯಾಕ್ಸ್ಕ್ರೆಡಿಟ್‌ ಮಾಡಿಕೊಂದ್ದಾರೆ. ಈ ಫಲಾನುಭವಿಗಳಿಂದ ವಾಣಿಜ್ಯ ತೆರಿಗೆ ಅಧಿಕಾರಿಗಳು180ಕೋಟಿರೂ. ವಂಚನೆ ಪತ್ತೆ ಮಾಡಿದ್ದಾರೆ. *ಎಚ್ಚರಿಕೆ ಅಗತ್ಯ : ಯಾವುದೇ ಹಣದ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆ ಅತ್ಯಗತ್ಯ. ಸ್ನೇಹಿತ, ಸಂಬಂಧಿ ಹೇಳಿದರು ಎಂದು ದಾಖಲೆಗಳನ್ನು ನೀಡಿ ಮೋಸ ಹೋಗಬೇಡಿ. ಇಂಥ ಪರಿಸ್ಥಿತಿ ಬಂದಾಗ ಕಾನೂನಾಗಲಿ ಅಥವಾ ಅಧಿಕಾರಿಗಳಾಗಲಿ, ಆರೋಪಿಗಳನ್ನು ಅಮಾಯಕರು ಎಂದು ಮಾಫಿ ಮಾಡಲಾರರು. ನಿರ್ಲಕ್ಷ್ಯಕ್ಕೆ ತಕ್ಕ ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ. ಐಟಿ ಆಕ್ಟ್‌, ಮನಿ ಲ್ಯಾಂಡ್ರಿಂಗ್‌ ಅಡಿ ಪ್ರಕರಣ ದಾಖಲಾಗುತ್ತದೆ. ಆಗ ತೆರಿಗೆ ಮೋಸ ಮಾಡಿದಷ್ಟೆ ಪ್ರಮಾಣದ ಹಣ ದಂಡದ ರೂಪದಲ್ಲಿ ಕಟ್ಟಬೇಕು ಜತೆಗೆ ಸೆರೆವಾಸವನ್ನು ಅನುಭವಿಸಬೇಕು. ಆದ್ದರಿಂದ ಸಾರ್ವಜನಿಕರು ಜಿಎಸ್ಟಿ ವಂಚನೆ ಪ್ರಕರಣಗಳಿಂದ ದೂರು ಇರುವುದು ಎಚ್ಚರ. : ̲ ̲ ̲ ̲ ̲ , .