ನಾಗಮಂಗಲ ಗಲಭೆ ಕೇಸ್: ತಮ್ಮ ವಿರುದ್ದ ಆರೋಪ ಮಾಡಿದ ಡಿ.ಕೆ ಸುರೇಶ್ ಗೆ ಹೆಚ್ ಡಿಕೆ ತಿರುಗೇಟು ಬೆಂಗಳೂರು, ಸೆಪ್ಟಂಬರ್,14,2024 (..):ನಾಗ ಮಂಗಲ ಗಲಭೆ ಹಿಂದೆ ಹೆಚ್.ಡಿ ಕುಮಾರಸ್ವಾಮಿ ಇರಬಹುದು ಎಂದು ಆರೋಪ ಮಾಡಿದ್ದ ಮಾಜಿ ಸಂಸದ ಡಿ.ಕೆ ಸುರೇಶ್ ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಆ ಬ್ರದರ್ ಗಳ ಹಿನ್ನೆಲೆ ಏನು ಎಂಬುದು ಇಡೀ ಜಗತ್ತಿಗೇ ಗೊತ್ತಿದೆ. ಡಿ.ಕೆ.ಸುರೇಶ್ ಅವರ ಹಿನ್ನಲೆ ಏನು ಅಂತ ಗೊತ್ತಿಲ್ಲವೇ? ಅವರ ಮಾರ್ಗವೇ ಎಲ್ಲರಿಗೂ ಜಗಜ್ಜಾಹೀರಾಗಿದೆ. ಅವರ ಮಾರ್ಗ ಎಂಥದು ಎನ್ನುವುದು ಎಲ್ಲರಿಗೂ ಗೊತ್ತು ಎಂದು ಕಿಡಿಕಾರಿದರು. ಅಣ್ಣ – ತಮ್ಮಂದಿರು ಯಾವ ಮಾರ್ಗದಲ್ಲಿ ಬಂದಿದ್ದಾರೆ. ಯಾರಿಗೆ ಹೇಗೆಲ್ಲ ಧಮ್ಕಿ ಹಾಕಿದ್ದಾರೆ. ಯಾರ ಯಾರ ಆಸ್ತಿಗಳನ್ನು ಲಪಟಾಯಿಸಿ ಲೂಟಿ ಮೂಡಿದ್ದಾರೆ, ಇದೆಲ್ಲವೂ ಜನರಿಗೆ ಗೊತ್ತಿದೆ. ಅಂತವರ ಬಗ್ಗೆ ನಾನು ಹೇಳಿಕೆ ಕೊಡಬೇಕಾ? ಎಂದು ಕುಟುಕಿದರು. ನಾಗಮಂಗಲದಲ್ಲಿ ನಾನೇನು ಬೆಂಕಿ ಹಚ್ಚೋದಕ್ಕೆ ಹೋಗಿದ್ದನಾ..? ಬೆಂಕಿ ಹಚ್ಚುವ ಸಂಸ್ಕೃತಿ ಅವರದ್ದು. ನಾನು ನಾಗಮಂಗಲಕ್ಕೆ ಹೋಗುವುದು ಇರಲಿ, ಕರ್ನಾಟಕಕ್ಕೆ ಬರುವುದನ್ನೇ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಮತ್ತು ನಮ್ಮ ಪಕ್ಷದ ಕಥೆ ಮುಗಿದೇ ಹೋಯಿತು ಎಂದುಕೊಂಡಿದ್ದರು. ಈಗ ಕೇಂದ್ರದಲ್ಲಿ ಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೆಚ್.ಡಿಕೆ ಕಿಡಿಕಾರಿದರು. : , , ,