ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಹೆಡ್ ಮಾಸ್ಟರ್- ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿಕೆ… ಹುಬ್ಬಳ್ಳಿ,ಮೇ,13,2019(..): ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಹೆಡ್ ಮಾಸ್ಟರ್ ಇದ್ದ ಹಾಗೆ. ಹೀಗಾಗಿ ತಮ್ಮ ಪಕ್ಷದ ನಾಯಕರನ್ನ ಕಂಟ್ರೋಲ್ ಮಾಡಬೇಕು ಎಂದು ಜೆಡಿಎಸ್ ನಾಯಕ ಬಸವರಾಜಹೊರಟ್ಟಿ ಸಲಹೆ ನೀಡಿದರು. ಸಿದ್ದರಾಮಯ್ಯ ಮತ್ತು ಹೆಚ್.ವಿಶ್ವನಾಥ್ ನಡುವಿನ ಟಾಕ್ ಫೈಟ್ ಕುರಿತು ಹುಬ್ಬಳ್ಳಿಯಲ್ಲಿ ಇಂದು ಪ್ರತಿಕ್ರಿಯಿಸಿದ ಬಸವರಾಜಹೊರಟ್ಟಿ, ನಮ್ಮವರನ್ನ ನಾವು ಕಂಟ್ರೋಲ್ ನಲ್ಲಿ ಇಡುತ್ತೇವೆ. ಈ ಬಗ್ಗೆ ನಮ್ಮ ವರಿಷ್ಠರ ಜತೆ ಮಾತನಾಡುತ್ತೇನೆ. ಕಾಂಗ್ರೆಸ್ ನಲ್ಲಿಯೂ ಸಹ ಸಿದ್ದರಾಮಯ್ಯ ತಮ್ಮ ನಾಯಕರನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲಿ ಎಂದರು. ಎಲ್ಲರೂ ಅವರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಹೀಗೆ ಹೇಳಿಕೆ ಕೊಡುತ್ತಿದ್ದರೇ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗುತ್ತದೆ ಎಂದು ಇಬ್ಬರು ನಾಯಕರಿಗೆ ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಚಾಟಿ ಬೀಸಿದರು. : - - - -