ಬಿಜೆಪಿಯಿಂದ ಜೆಡಿಎಸ್ ಶಾಸಕ 10 ಕೋಟಿ ಪಡೆದಿದ್ದಾರೆ: ಫಲಿತಾಂಶದ ಬಳಿಕ ಮುಂಬೈನತ್ತ ಪ್ರಯಾಣ- ಹೊಸ ಬಾಂಬ್ ಸಿಡಿಸಿದ ಕೆ.ಬಿ ಚಂದ್ರಶೇಖರ್… ಮಂಡ್ಯ,ಮೇ,14,2019(..): ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಬಿಜೆಪಿಯಿಂದ 10 ಕೋಟಿ ಹಣ ಪಡೆದಿರುವ ಬಗ್ಗೆ ಮಾಹಿತಿ ಇದೆ. ಫಲಿತಾಂಶದ ಬಳಿಕ ಅವರು ಮುಂಬೈನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ. ಕೆ.ಆರ್ ಪೇಟೆಯಲ್ಲಿ ಇಂದು ಮಾತನಾಡಿದ ಕೆಬಿ ಚಂದ್ರ ಶೇಖರ್, ಅಂದು ಬಿಜೆಪಿ ಅಪರೇಷನ್ ಕಮಲಕ್ಕೆ ಭಂಗ ಆಗಿತ್ತು. ಅಂದೇ ಶಾಸಕ ನಾರಾಯಣಗೌಡ ಬಿಜೆಪಿಯಿಂದ ಹಣ ಪಡೆದಿದ್ದರು. ಮಾತುಕತೆಯಂತೆ ಬಾಕಿ ಹಣ ನೀಡಿದರೇ ಫಲಿತಾಂಶದ ಬಳಿಕ ನಾರಾಯಣಗೌಡ ಮುಂಬೈಗೆ ಹೋಗುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ನನ್ನ ಬಳಿ ಬಿಜೆಪಿ ಸ್ನೇಹಿತರು ತಿಳಿಸಿದ್ದಾರೆ ಎಂದು ಹೇಳಿದರು. ನಾರಾಯಣಗೌಡ ಓರ್ವ ಹುಟ್ಟು ಗೂಂಡಾ, ಒಂದ, ಎರಡಾ ನೂರಾರು ಕೆಟ್ಟಕೆಲಸಗಳನ್ನ ಮಾಡಿದ್ದಾನೆ ಎಂದು ಕೆಬಿ ಚಂದ್ರಶೇಖರ್ ಆರೋಪಿಸಿದರು. ಹಾಗೆಯೇ ಸಿದ್ದರಾಮಯ್ಯ ಮತ್ತೆ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೆಬಿ ಚಂದ್ರ ಶೇಖರ್, ಸಿಎಂ ಆಗಬೇಕೆಂಬ ಬಯಸುವವರಲ್ಲಿ ನಾನೂ ಒಬ್ಬ. ಸಿದ್ದರಾಮಯ್ಯ ತಾವು ನೀಡಿದ ಎಲ್ಲಾ ಆಶ್ವಾಸನೆಗಳನ್ನ ಈಡೇರಿಸಿದ್ದಾರೆ. ಹೀಗಿರುವಾಗ ಅವರು ಮತ್ತೆ ಸಿಎಂ ಆದ್ರೆ ತಪ್ಪೇನು ಎಂದು ಪ್ರಶ್ನಿಸಿದರು. : – - 10 – - .