ಸಿದ್ದರಾಮಯ್ಯ ಆನೆ ಇದ್ದಂತೆ: ಆನೆ ನಡೆದುಕೊಂಡು ಹೋಗುತ್ತಿದ್ರೆ ನಾಯಿಗಳು ಬೊಗಳುತ್ತವೆ- ‘ಕೈ’ ಶಾಸಕ ಎಸ್.ಟಿ ಸೋಮಶೇಖರ್… ಬೆಂಗಳೂರು,ಮೇ,13,2019(..): ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಎಸ್.ಟಿ ಸೋಮಶೇಖರ್ ಸಿದ್ದರಾಮಯ್ಯ ಆನೆ ಇದ್ದಂತೆ ಆನೆ ನಡೆದುಕೊಂಡು ಹೋಗುತ್ತಿದ್ದರೆ ನಾಯಿಗಳು ಬೊಗಳುತ್ತಿರುತ್ತವೆ ಎಂದು ಟಾಂಗ್ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಇಂದು ಮಾತನಾಡಿದ ಎಸ್.ಟಿ ಸೋಮಶೇಖರ್, ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರು. ಅವರು ಹಿರಿಯರು. ಅವರ ಹೇಳಿಕೆಗೆ ನಮ್ಮ ಅಧ್ಯಕ್ಷರು ಮಾತನಾಡುತ್ತಾರೆ. ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದರು. ಹಾಗೆಯೇ ಸಿದ್ದರಾಮಯ್ಯ ಆನೆಯಿದ್ದಂತೆ, ಆನೆ ನಡೆದುಕೊಂಡು ಹೋಗುತ್ತಿರುವಾಗ ನಾಯಿಗಳು ಬೊಗಳುತ್ತವೆ. ನಾಯಿ ಬೊಗಳುತ್ತವೆ ಅಂತಾ ಆನೆ ಹಿಗ್ಗೋದು ಇಲ್ಲ. ಕುಗ್ಗೋದು ಇಲ್ಲ. ಆದೇ ರೀತಿ ಆನೆ ಥರ ಹೊಗಳಿದ್ರೂ ಸಿದ್ದರಾಮಯ್ಯ ಹಿಗ್ಗಲ್ಲ. ಯಾರಾದರೂ ಬೈದರೂ ಸಹ ಸಿದ್ದರಾಮಯ್ಯ ಕುಗ್ಗಲ್ಲ ಎಂದು ಎಸ್. ಟಿ ಸೋಮಶೇಖರ್ ಹೇಳಿದರು. : – –- – - …