ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು… ಮಂಡ್ಯ,ಮೇ,13,2019(..): ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಲುಮುರಿಯಲ್ಲಿ ನಡೆದಿದೆ. ಮೈಸೂರಿನ ಗಾಂಧಿ ನಗರದ ಶಿವು(21), ಮಹದೇವ (20) ಮೃತಪಟ್ಟ ಯುವಕರು. ಶಿವು, ಮಹದೇವ ಸೇರಿ 6 ಜನ ಸ್ನೇಹಿತರು ಪ್ರವಾಸಕ್ಕೆ ಬಂದಿದ್ದರು. ಬಲುಮುರಿಯ ಕಾವೇರಿ ನದಿಯಲ್ಲಿ ಈಜಲು ಇಳಿದಾಗ ಇಬ್ಬರು ಯುವಕರು ಸುಳಿಗೆ ಸಿಲುಕಿ ಈ ಘಟನೆ ನಡೆದಿದೆ. ಓರ್ವನ ಮೃತದೇಹ ಸಿಕ್ಕಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮತ್ತೊಂದು ಮೃತದೇಹಕ್ಕೆ ಹುಡುಕಾಟ ನಡೆದಿದೆ. ಈ ಕುರಿತು ಕೆ.ಆರ್.ಎಸ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : - - – –-