ನಾವು ಪ್ರೀತಿಯನ್ನು ಹಂಚುತ್ತಿದ್ದೇವೆ: ಮತದಾನದ ಬಳಿಕ ರಾಹುಲ್ ಗಾಂಧಿ ಹೇಳಿಕೆ ನವದೆಹಲಿ:ಮೇ-12:(..) ಲೋಕಸಭಾ ಚುನಾವನೆಯ 6ನೇ ಹಂತದ ಮತದಾನ ಭರದಿಂದ ಸಾಗಿದ್ದು, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ದೆಹಲಿಯ ಔರಂಗಜೇಬ್​ ಲೇನ್​ನಲ್ಲಿ ಮತದಾನ ಮಾಡಿದರು. ಜೌರಂಗಾಜೇಬ್ ಲೇನ್ ನ ಎನ್​ಪಿ ಸಿನಿಯರ್​ ಸೆಕೆಂಡರಿ ಸ್ಕೂಲ್​ ಮತಗಟ್ಟೆಯಲ್ಲಿಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು ನೋಟು ಅಮಾನೀಕರಣ, ರೈತರ ಸಮಸ್ಯೆಗಳು, ಗಬ್ಬರ್​​ ಸಿಂಗ್​ ಟ್ಯಾಕ್ಸ್​ ಮತ್ತು ರಫೇಲ್​ ಒಪ್ಪಂದದಲ್ಲಿನ ಭ್ರಷ್ಟಾಚಾರ ಸೇರಿದಂತೆ ಅನೇಕ ಪ್ರಮುಖ ಅಂಶಗಳ ವಿರುದ್ಧ ಈ ಚುನಾವಣೆಯಲ್ಲಿ ಹೋರಾಟ ನಡೆಯುತ್ತಿದೆ ಎಂದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ದ್ವೇಷವನ್ನು ಬಳಸಿದರೆ, ನಾನು ಪ್ರೀತಿಯನ್ನು ಬಳಕೆ ಮಾಡಿದ್ದೇವೆ. ನಾವು ಗೆಲ್ಲುತ್ತೇವೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ. ಈ ನಡುವೆ ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ರಾಷ್ಟ್ರಪತಿ ಭವನದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ.