ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಯೋಧ ಹಾಕಿದ್ದ ಮೊದಲ ಮತವೇ ಅಸಿಂಧು… ಮಂಡ್ಯ,ಮೇ,10,2019(..): ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಹಾಕಿದ್ದ ಮೊದಲ ಮತವೇ ಅಸಿಂಧುವಾಗಿದೆ. ಹೌದು, ಗೌಪ್ಯತೆ ಕಾಪಾಡದ ಹಿನ್ನೆಲೆ ಮಂಡ್ಯ ಮೂಲದ ಸಿಆರ್​​ಪಿಎಫ್ ಯೋಧ ರಾಜನಾಯಕ್ ಎಂಬುವವರು ಅಂಚೆ ಮತದಾನ ಮೂಲಕ ಹಾಕಿದ್ದ ಮತವನ್ನ ಚುನಾವಣ ಆಯೋಗ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಅಂಚೆ ಮತದಾನ ಮೂಲಕ ಸುಮಲತಾರಿಗೆ ಯೋಧ ರಾಜನಾಯಕ್ ಮತ ಹಾಕಿದ್ದರು. ತಾನು ಸುಮಲತಾ ಅವರಿಗೆ ವೋಟ್ ಹಾಕಿರುವುದನ್ನ ಸೆಲ್ಫಿ ತೆಗೆದು ಫೇಸ್ಬುಕ್​​ ಗೆ ಅಪ್​ಲೋಡ್​​ ಮಾಡಿದ್ದರು. ಹೀಗಾಗಿ ಮತದಾನದ ಗೌಪ್ಯತೆ ಕಾಪಾಡದ ಹಿನ್ನೆಲೆ ಯೋಧ ರಾಜನಾಯಕ್ ಹಾಕಿದ್ದ ಮತ ಅಸಿಂಧುವಾಗಿದೆ. ಈ ಸಂಬಂಧ ಯೋಧನ ವಿರುದ್ದ ಏ. 10ರಂದು ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆ ಚುನಾವಣಾ ಆಯೋಗದಿಂದ ಯೋಧನ ಮತ ಅಸಿಂಧುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ. : - –- - –