ಕೇವಲ 10 ರೂ. ಪಾರ್ಕಿಂಗ್ ಚಾರ್ಚ್ ನೀಡುವ ವಿಚಾರಕ್ಕೆ ಜಗಳ: ಬೈಕ್ ಸವಾರನ ಕೊಲೆಯಲ್ಲಿ ಅಂತ್ಯ… ಬೆಂಗಳೂರು,ಮೇ,10,2019(..): 10. ರೂ ಪಾರ್ಕಿಂಗ್ ಚಾರ್ಚ್ ನೀಡುವ ವಿಚಾರಕ್ಕೆ ಜಗಳವಾಗಿ ವ್ಯಕ್ತಿಯ ಹತ್ಯೆಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭರಣೀಧರನ್ ಕೊಲೆಯಾದ ವ್ಯಕ್ತಿ. ಭರಣಿಧರನ್ ಲಾವಣ್ಯ ಥಿಯೇಟರ್ ಬಳಿ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದರು. ಈ ನಡುವೆ 10 ರೂ ಪಾರ್ಕಿಂಗ್ ಚಾರ್ಚ್ ನೀಡುವಂತೆ ಸೆಲ್ವಂ ಎಂಬಾತ ಭರಣಿಧರನ್ ಗೆ ಕೇಳಿದ್ದಾನೆ. ಆದರೆ ಭರಣಿದರನ್ ಪಾರ್ಕಿಂಗ್ ಗೆ ಹಣ ನೀಡದ ಹಿನ್ನೆಲೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಸೆಲ್ವಂ ಭರಣಿಧರನ್ ಮೇಲೆ ಹಲ್ಲೆ ನಡೆಸಿದ್ದು, ಈ ಸಮಯದಲ್ಲಿ ಗಂಭೀರ ಗಾಯಗೊಂಡ ಭರಣಿದರನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಭರಣಿದರನ್ ಮೃತದೇಹವನ್ನ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. : - 10 - – –-- -