ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂಬ ವಿಚಾರ: ಶಾಸಕ ಕೆ.ಸುಧಾಕರ್ ಹೇಳಿಕೆಗೆ ದನಿಗೂಡಿಸಿದ ಸಚಿವ ಎಂ.ಬಿ ಪಾಟೀಲ್…. ಬೆಂಗಳೂರು,ಮೇ,7,2019(..): ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹೇಳಿದ್ದ ಕಾಂಗ್ರೆಸ್ ಶಾಸಕ ಕೆ.ಸುಧಾಕರ್ ಹೇಳಿಕೆಗೆ ಇದೀಗ ಸಚಿವ ಎಂ.ಬಿ ಪಾಟೀಲ್ ದನಿಗೂಡಿಸಿದ್ದಾರೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದು ನಾನೂ ಸಹ ಹೇಳುತ್ತೇನೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ಶಾಸಕ ಸುಧಾಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅಂತಾ ನಾನೂ ಹೇಳುತ್ತೇನೆ . ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಬೇಕಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಳ್ಳೆಯ ಕೆಲಸವನ್ನ ಮಾಡಿದ್ದರು. ಆದರೆ ಜನರ ತೀರ್ಪು ಗೌರವಿಸಬೇಕು ಎಂದು ಹೇಳಿದರು. ನಾನೂ ಕೂಡ ಸಿಎಂ ಆಕಾಂಕ್ಷಿ.. ಹಾಗೆಯೇ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ನಾನು ಕೂಡ ಮುಖ್ಯಮಂತ್ರಿ ಆಗುವ ಆಕಾಂಕ್ಷಿ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ತಾರೆ. ಆದ್ರೆ ನಾನು ಕಾಯುತ್ತೇನೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ನಿನ್ನೆ ಮಾಧ್ಯಮಗಳ ಜತೆ ಮಾತನಾಡಿದ್ದ ಚಿಕ್ಕಬಳ್ಳಾಪುರ ಕೈ ಶಾಸಕ ಸುಧಾಕರ್, ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾದರೇ ಒಳ್ಳೆಯದು ಎಂದು ಹೇಳಿಕೆ ನೀಡಿದ್ದರು. : - - – -..