ಬೆಂಗಳೂರಿನಲ್ಲಿ ಮತ್ತೊಂದು ಬಾಲಕಿ ಅನುಮಾನಸ್ಪದ ಸಾವು: ಮನೆ ಸಂಪ್ ನಲ್ಲಿ ಮೃತದೇಹ ಪತ್ತೆ… ಬೆಂಗಳೂರು,ಮೇ,7,2019(..): ಬೆಂಗಳೂರಿನಲ್ಲಿ ಮನೆಯೊಂದರಲ್ಲಿ ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಸುದ್ದಿ ಬೆನ್ನಲ್ಲೆ ಇದೀಗ ಮತ್ತೊಂದು ಬಾಲಕಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾಗಲಗುಂಟೆ ಮಲ್ಲಸಂದ್ರದ ಮನೆಯಲ್ಲಿ ಪೂಜಾ ಎಂಬ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಮನೆಯಲ್ಲಿ ತಂದೆ ತಾಯಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿತ್ತು. ಇದೀಗ ಬೆಂಗಳೂರಿನ ರಾಜಗೋಪಾಲನಗರದಲ್ಲಿ ಅಂತಹದ್ದೆ ಒಂದು ಘಟನೆ ನಡೆದಿದೆ. ಮನೆಯ ಮುಂಭಾಗದ ಸಂಪ್ ನಲ್ಲಿ 13 ವರ್ಷದ ಬಾಲಕಿ ಜ್ಯೋತಿ ಮೃತದೇಹ ಪತ್ತೆಯಾಗಿದೆ. ರಾಯಚೂರು ಮೂಲದ ದಂಪತಿಗಳಾದ ಪಾರ್ವತಮ್ಮ ಬುಗ್ಗಪ್ಪ ಅವರ ಪುತ್ರಿ ಜ್ಯೋತಿ ರಾಜಗೋಪಾಲನಗರದ ಅಲ್ಪನಾಥ್ ಎಂಬುವವರ ಮನೆ ಕೆಲಸ ಮಾಡುತ್ತಿದ್ದಳು. ಈ ನಡುವೆ ಇಂದು ಬೆಳಿಗ್ಗೆ 9 ಗಂಟೆ ವೇಳೆಗೆ ಬಾಲಕಿ ಜ್ಯೋತಿ ಶವ ಮನೆ ಮುಂಭಾಗದ ಸಂಪ್ ನಲ್ಲಿ ಪತ್ತೆಯಾಗಿದೆ. ಬಾಲಕಿ ಸಂಪ್ ಗೆ ಬಿದ್ದಾಗ ಸಂಪ್ ಬಾಗಿಲು ಮುಚ್ಚಿ ಬೀಗ ಹಾಕಿದ ಆರೋಪ ವ್ಯಕ್ತಿಯೊಬ್ಬನ ಮೇಲೆ ಕೇಳಿ ಬಂದಿದ್ದು ಆತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - – - – - .