ಸಾಧ್ವಿ ಪತ್ರಿಕೆ ಕಚೇರಿಯಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಮೈಸೂರು,ಮೇ,2,2019(..): ಅನಾರೋಗ್ಯದಿಂದ ಇಂದು ನಿಧನರಾದ ಹಿರಿಯ ನಟ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಸಾಧ್ವಿ ಪತ್ರಿಕೆ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶತಮಾನದ ಪತ್ರಿಕೆ ಸಾಧ್ವಿ ಬಗ್ಗೆ ಮಾ. ಹಿರಣ್ಣಯ್ಯ ನಿರಂತರ ಅಭಿಮಾನ ಹೊಂದಿದ್ದರು. ಬಾಲ್ಯದ ದಿನಗಳಲ್ಲಿ ಮೈಸೂರು ನಗರದ ರಸ್ತೆಗಳಲ್ಲಿ ನಿಂತು ಸಾಧ್ವಿ ಪತ್ರಿಕೆ ಮಾರಾಟ ಮಾಡುತ್ತಿದ್ದರು. ಈ ವಿಚಾರವನ್ನು ಸ್ವತ: ಪತ್ರದ ಮುಖೇನ ಸಾಧ್ವಿ ಸಂಪಾದಕ ಮಹೇಶ್ವರನ್ ಅವರಿಗೆ ಮಾಸ್ಟರ್ ಹಿರಣ್ಷಯ್ಯ ತಿಳಿಸಿದ್ದರು. ಮಾಸ್ಟರ್ ಹಿರಣ್ಣಯ್ಯರ ಸಾಧ್ವಿ ಸೇವೆ ಸ್ಮರಿಸಿ ಇಂದು ಸಾಧ್ವಿ ಪತ್ರಿಕೆ ಕಚೇರಿಯಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು. ಸಾಧ್ವಿ ಸಂಪಾದಕ ಸಿ. ಮಹೇಶ್ವರನ್, ನಗರಪಾಲಿಕೆ ಸದಸ್ಯ ಸತೀಶ್, ಲ್ಯಾನ್ಸ ಡೌನ್ ಬಿಲ್ಡಿಂಗ್ ಅಂಗಡಿಗಳ ಮಾಲೀಕರ ಸಂಘದ ಎಂ.ಆರ್. ವಿಜಯ್ ಕುಮಾರ್, ಬಿಜೆಪಿ ಮುಖಂಡ ಬ್ರಹ್ಮಾಚಾರ್, ಕುಮಾರಸ್ವಾಮಿ, ಪುಟ್ಟ ಸ್ವಾಮಿಗೌಡ ಮತ್ತಿತರರು ಭಾಗಿಯಾಗಿದ್ದರು. : –- -’ –-