ಜೆಡಿಎಸ್ ಕಾರ್ಯಕರ್ತರಿಂದ ಬಿಜೆಪಿಗೆ ವೋಟ್ ಹೇಳಿಕೆ ವಿಚಾರ: ಸ್ಪಷ್ಟನೆ ನೀಡಿದ ಉದ್ಬೂರು ಜೆಡಿಎಸ್ ಮುಖಂಡರು… ಮೈಸೂರು,ಮೇ,2,2019(..): ಮೈಸೂರಿನಲ್ಲಿ ಅದರಲ್ಲೂ ಉದ್ಬೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಿ.ಟಿ ದೇವೇಗೌಡರು ನೀಡಿದ್ದ ಹೇಳಿಕೆ ಕುರಿತು ಉದ್ಬೂರು ಜೆಡಿಎಸ್ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ನಮಗೆ ಸಚಿವ ಜಿಟಿ ದೇವೇಗೌಡರ ಮೇಲೆ ಪ್ರೀತಿ ಇದೆ. ಆದರೆ ನಮಗೆ ಕಾರ್ಯಕರ್ತರೇ ಮುಖ್ಯ. ಹೀಗಾಗಿ ಜಿ.ಟಿ ದೇವೇಗೌಡರು ಹೇಳಿದ್ರೂ ನಾವು ಕೇಳಲಾಗಲಿಲ್ಲ ಎಂದು ಉದ್ಬೂರು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ನವರು ನಮ್ಮ ಮೇಲೆ ಹಾಕಿರುವ ಕೇಸ್ ಹಾಗೆಯೇ ಇವೆ. ಹೀಗಿರುವಾಗ ಕಾಂಗ್ರೆಸ್ ಬೆಂಬಲಿಸಲು ಹೇಗೆ ಸಾಧ್ಯ..? ಎಂದು ಪ್ರಶ್ನಿಸಿದ್ದು ಮೈತ್ರಿ ಏನಿದ್ರೂ ನಾಯಕರು ಮುಖಂಡರಿಗೆ ಮಾತ್ರ ಕಾರ್ಯಕರ್ತರಿಗಲ್ಲ. ಸಿದ್ದರಾಮಯ್ಯ ಬಂದು ಹೇಳಿದರೂ ನಮ್ಮ ಯುವಕರು ಕೇಳುವುದಿಲ್ಲ ಎಂದು ಉದ್ಬೂರು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ. : - – – - -