ಶೆಟ್ಟರ್ ಬಿಜೆಪಿಗೆ ಹೋಗಿರೋದು ಲಾಭನೂ ಇಲ್ಲ ನಷ್ಟನೂ ಇಲ್ಲ-ಸಚಿವ ಚಲುವರಾಯಸ್ವಾಮಿ. ಮಂಡ್ಯ,ಜನವರಿ,26,2024(..):ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ನಿನ್ನೆ ಅಚ್ಚರಿ ಎಂಬಂತೆ ಕಾಂಗ್ರೆಸ್ ತೊರೆದು ಮತ್ತೆ ಮರಳಿ ಬಿಜೆಪಿಗೆ ಸೇರಿದ್ದು ಶೆಟ್ಟರ್ ನಡೆಗೆ ಹಲವು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಜಗದೀಶ್ ಶೆಟ್ಟರ್ ಹೋದರೂ ಪಕ್ಷಕ್ಕೆ ಲಾಭನೂ ಇಲ್ಲ ನಷ್ಟನೂ ಇಲ್ಲ ಎಂದರು. ಶೆಟ್ಟರ್ ಅವರನ್ನ ಕಾಂಗ್ರೆಸ್ ಗೆ ಬನ್ನಿ ಅಂತ ಕರೆದಿರಲಿಲ್ಲ. ಅವರಾಗೇ ಬಂದಿದ್ದರು ಈಗ ಮರಳಿ ಬಿಜೆಪಿಗೆ ಹೋಗಿದ್ದಾರೆ. ಎಲ್ಲವನ್ನ ಜನತೆ ಆದೇಶಕ್ಕೆ ಬಿಡೋಣ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. : – - - - .