ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರ: ಮಹತ್ವದ ಮಾಹಿತಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ. ಬೆಂಗಳೂರು,ಜನವರಿ,23,2024(..):ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಈಗಾಗಲೇ ನಿಗಮ ಮಂಡಳಿ ಆಯ್ಕೆ ಮೊದಲ ಹಂತದಲ್ಲಿ ಎಂಎಲ್ಎ ಗಳಿಗೆ ಅವಕಾಶ ಮಾಡಿಕೊಟ್ಟು ಅಂತಿಮ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಸಲ್ಲಿಸಲಾಗಿದೆ. ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಕೊಡಲು ಎಲ್ಲಾ ಸಿದ್ದತೆ ನಡೆಯುತ್ತಿದೆ. ಅಂತಿಮವಾಗಿ ಪಕ್ಷದ ವರಿಷ್ಠರು ಯಾರೆಂದು ಪರಿಗಣಿಸಿ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ನಾವು ಮಹಾತ್ಮ ಗಾಂಧಿ ಹೇಳಿದ, ವಾಲ್ಮೀಕಿ ರಾಮಾಯಣದ ರಾಮನನ್ನ ಗೌರವಿಸುವುದೇ ಹೊರತು ಬಿಜೆಪಿಯವರ ರಾಮನನ್ನಲ್ಲ. ಬಿಜೆಪಿಯವರು ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಾವು ದ್ವೇಷ ಮಾಡುತ್ತೇವೆ. ನಮ್ಮ‌ ಪ್ರತಿ ಹಳ್ಳಿಗಳಲ್ಲೂ ರಾಮ ಮಂದಿರ ಇದೆ. ಅಲ್ಲಿರುವ ರಾಮ ರಾಮನಲ್ವಾ.? ಬಿಜೆಪಿ ಅವರು ಇದನ್ನೇ ದೊಡ್ಡ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. : - - - –-