ಚಿತ್ರಕಲಾ ಸ್ಪರ್ಧೆ: ಸ್ಥಳದಲ್ಲೇ ಚಿತ್ರ ಬಿಡಿಸಿ ಬೈಸಿಕಲ್ ಗೆಲ್ಲಿ.. ಮೈಸೂರು.ಜನವರಿ.23,2024(..):ಮೈಸೂರು ಫೆಸ್ಟ್ ಕಾರ್ಯಕ್ರಮದ ಪ್ರಯುಕ್ತ “ನಮ್ಮ ಪರಂಪರೆ, ನಿಮ್ಮ ತಾಣ”(“ , ) ಮೈಸೂರು ಪ್ರವಾಸೋದ್ಯಮವನ್ನು ಪ್ರತಿಬಿಂಬಿಸುವ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯಿಂದ ಜನವರಿ 27 ರಂದು ಮೈಸೂರು ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದ ಮುಂಭಾಗ ಬೆಳಗ್ಗೆ 9.30 ರಿಂದ 11.೦೦ ಗಂಟೆವರೆಗೆ ನಡೆಸಲಾಗುತ್ತದೆ. 8 ರಿಂದ 12ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ://./BbWdJUzv1uFAeuXb8 ಲಿಂಕ್ ನ ಮೂಲಕ ಸಲ್ಲಿಸಬಹುದಾಗಿದ್ದು , ಸ್ಥಳ ನೋಂದಣಿಗೆ ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಸ್ಪರ್ಧಿಗಳಿಗೆ ಬೈಸಿಕಲ್, ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 7411564510 ಅನ್ನು ಹಾಗೂ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ visit_mysuru ಪೇಜನ್ನು ಫಾಲೋ ಮಾಡಿ ಎಂದು ಮೈಸೂರು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. : - - - – – -