ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ-ಸಚಿವ ಕೆ.ಎನ್ ರಾಜಣ್ಣ ಘೋಷಣೆ ತುಮಕೂರು,ಸೆಪ್ಟಂಬರ್,14,2024 (..):ಸಹಕಾರ ಸಚಿವ ಕೆ.ಎನ್ ರಾಜಣ್ಣ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಕೆ.ಎನ್ ರಾಜಣ್ಣ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದು ಘೋಷಣೆ ಮಾಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ಸಿದ್ದರಾಮಯ್ಯ ಮುಂದುವರಿಕೆ ಬಗ್ಗೆ ಅನುಮಾನ ಬೇಡ. ಕಾಂಗ್ರೆಸ್ ಬಿಜೆಪಿಗೆ ಹೈಕಮಾಂಡ್ ಇದೆ. ಜೆಡಿಎಸ್ ನ ಹೈಕಮಾಂಡ್ ಬೆಂಗಳೂರಿನ ಪದ್ಮನಾಭನಗರದಲ್ಲಿದೆ ಎರಡೂ ಪಕ್ಷದಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಬಿಜೆಪಿಯಲ್ಲಿ ಎಷ್ಟು ಬಾರಿ ಸಿಎಂ ಬದಲಾವಣೆ ಆಗಿದೆ. ಕಾಂಗ್ರೆಸ್ ನಲ್ಲೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. : , , ,