ನಾಗಮಂಗಲ ಗಲಭೆ ಹಿಂದೆ ಹೆಚ್.ಡಿಕೆ ಕೈವಾಡ ಇರಬಹುದು- ಮಾಜಿ ಸಂಸದ ಡಿ.ಕೆ ಸುರೇಶ್ ಬೆಂಗಳೂರು,ಸೆಪ್ಟಂಬರ್,14,2024 (..):ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ಹೆಚ್.ಡಿ ಕುಮಾರಸ್ವಾಮಿಯವರೇ ಗಲಭೆ ಮಾಡಿಸಿರಬಹುದು ನಾನೂ ಕೂಡ ಅವರ ಮೇಲೆ ಆರೋಪ ಮಡಬಹುದಲ್ಲ ಎಂದು ಟಾಂಗ್ ಕೊಟ್ಟರು. ಹೆಚ್. ಡಿ ಕುಮಾರಸ್ವಾಮಿ ಪ್ರತಿ ವಾರ ಮಂಡ್ಯಕ್ಕೆ ಬರ್ತಾರೆ, ಹಾಗೆಯೇ ಗಲಾಟೆಯನ್ನೂ ಮಾಡಿಸಿರಬಹುದು. ಮುಸ್ಲೀಮನಾಗಿ ಹುಟ್ಟುವೆ ಎಂದು ಈ ಹಿಂದೆ ಹೇಳಿದ್ದವರು ಯಾರು? ಕುಮಾರಸ್ವಾಮಿ ನಿತ್ಯ ಒಂದೊಂದು ಹೇಳಿಕೆ ಕೊಡ್ತಾರೆ. ಈ ಹಿಂದೆ ಗಲಭೆಗಳಾದಾಗ ಹೆಚ್.ಡಿ.ಕುಮಾರಸ್ವಾಮಿ ಯಾವ ಹೇಳಿಕೆಗಳನ್ನು ಕೊಟ್ಟಿದ್ದರು. ಅಮಿತ್ ಶಾ, ಮೋದಿ ವಿರುದ್ಧ ಕಿಡಿಕಾರಿದ್ದರು ಎಂದು ಡಿ.ಕೆ ಸುರೇಶ್ ಕಿಡಿಕಾರಿದರು. : , , , ,