ಸಿಸಿಬಿಯಿಂದ ಬಿ.ಕೆ ಹರಿಪ್ರಸಾದ್ ವಿಚಾರಣೆ: ರಾಜ್ಯಪಾಲರ ವಿರುದ್ದ ಆರೋಪ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರು,ಜನವರಿ,20,2024(..):ರಾಜ್ಯದಲ್ಲೂ ಗೋಧ್ರಾ ಹತ್ಯಾಕಂಡ ಮಾದರಿಯಲ್ಲಿ ಘಟನೆ ನಡೆಯಬಹುದು ರಾಮಮಂದಿರ ಉದ್ಘಾಟನೆಗೆ ಹೋಗುವವರಿಗೆ ರಕ್ಷಣೆ ನೀಡಿ ಎಂದು ಹೇಳಿಕೆ ನೀಡಿದ್ದ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಅವರನ್ನ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ದ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿರುವ ‍ಪ್ರಿಯಾಂಕ್ ಖರ್ಗೆ, ರಾಜ್ಯಪಾಲರು ಪದೇ ಪದೇ ಇದರ ಬಗ್ಗೆ ಕೇಳುತ್ತಿದ್ದಾರೆ. ತನಿಖೆ ಆಗ್ತಿದ್ಯಾ ಇಲ್ವಾ ಅಂತಾ ಕೇಳುತ್ತಿದ್ದಾರೆ ರಾಜ್ಯಪಾಲರು ಹೀಗೆ ಯಾಕೆ ಆಸಕ್ತಿ ವಹಿಸಿದ್ದಾರೆ ಎಂದು ಗಮನಿಸಬೇಕು. ಇದರ ಹಿಂದೆ ಕೇಂದ್ರದ ನಿರ್ದೇಶನವಿದೆಯಾ. ಸರ್ಕಾರಕ್ಕೆ ಮುಜುಗರ ತರುವ ಉದ್ದೇಶವಿದೆಯೇ ಎಂಬುದನ್ನು ಪತ್ತೆ ಹಚ್ಚಬೇಕು. ಬಿಕೆ ಹರಿಪ್ರಸಾದ್ ವಿಚಾರಣೆ ಮೂಲಕ ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ. ರಾಝ್ಯಪಾಲರ ಮೂಲಕ ಬಿಜೆಪಿ ಆಳ್ವಿಕೆ ಮಾಡುತ್ತಿದೆ. ಲಾ ಅಂಡ್ ಆರ್ಡರ್ ಗೂ ರಾಜ್ಯಪಾಲರಿಗೂ ಏನು ಸಂಬಂಧ ಬಿಜೆಪಿ ಸರ್ಕಾರ ಇದ್ದಾಗ ಎಂದೂ ಹೀಗಾಗಿರಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. : ---- -