ರಾಮ ಮಂದಿರ ಉದ್ಘಾಟನೆ ಸಂಪೂರ್ಣ ಮೋದಿ ಅವರ ರಾಜಕೀಯ ಕಾರ್ಯಕ್ರಮ- ರಾಹುಲ್ ಗಾಂಧಿ ಟೀಕೆ. ನವದೆಹಲಿ,ಜನವರಿ,16,2024(..):ಜನವರಿ 22 ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಸಂಪೂರ್ಣ ಪ್ರಧಾನಿ ಮೋದಿ ಅವರ ರಾಜಕೀಯ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು. ಭಾರತ್ ಜೋಡೋ ನ್ಯಾಯ್ ಯಾತ್ರಾದಲ್ಲಿ ಭಾಗವಹಿಸಿ ಮಾತನಾಡಿರುವ ರಾಹುಲ್ ಗಾಂಧಿ, ಆರ್ ಎಸ್‌ಎಸ್ ಮತ್ತು ಬಿಜೆಪಿಯು ಜನವರಿ 22ರ ಕಾರ್ಯಕ್ರಮವನ್ನು ಸಂಪೂರ್ಣ ನರೇಂದ್ರ ಮೋದಿ ರಾಜಕೀಯ ಕಾರ್ಯಕ್ರಮವಾಗಿ ಮಾಡಿದೆ. ಇದು ಆರ್ ಎಸ್‌ಎಸ್- ಬಿಜೆಪಿ ಕಾರ್ಯಕ್ರಮ. ಹೀಗಾಗಿ ಕಾಂಗ್ರೆಸ್ ಈ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ಹೇಳಿದೆ ಎಂದರು. “ನಾವು ಎಲ್ಲಾ ಧರ್ಮೀಯರಿಗೆ, ಎಲ್ಲಾ ಆಚರಣೆಗಳಿಗೆ ಮುಕ್ತರಾಗಿದ್ದೇವೆ. ಹಿಂದೂ ಧರ್ಮದ ಹಿರಿಯ ಮುಖಂಡರೂ ಕೂಡಾ ಜನವರಿ 22ರ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದು ರಾಜಕೀಯ ಕಾರ್ಯಕ್ರಮ ಎಂದು ಹೇಳಿದ್ದಾರೆ” ಎಂದು ರಾಹುಲ್ ಟೀಕಿಸಿದರು. .. : – – - -