ಐದು ವರ್ಷನೋ ಎರಡು ವರ್ಷನೋ ಹೈಕಮಾಂಡ್ ತೀರ್ಮಾನ- ಶಾಸಕ ಲಕ್ಷ್ಮಣ್ ಸವದಿ. ಕಲಬುರ್ಗಿ,ಜನವರಿ,17,2024(..):ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಶಾಸಮ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಇದು ಯತೀಂದ್ರ ಅವರ ವೈಯಕ್ತಿಕ ಅಭಿಪ್ರಾಯ. ಹೈಕಮಾಂಡ್ ಮನಸ್ಸು ಮಾಡಿದ್ರೂ ಎರಡೇ ವರ್ಷ ಸಿಎಂ ಆಗಬಹುದು ಅಥವಾ 5 ವರ್ಷ ಸಿಎಂ ಆಗಬುಹುದು. ಐದು ವರ್ಷನೋ 2 ವರ್ಷನೋ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ನಂದ್ ಕುಮಾರ್ ಹೆಗಡೆ ಅವರು ಏಕವಚನ ಪ್ರಯೋಗ ವಿಚಾರ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್ ಸವದಿ, ಈ ರೀತಿ ಹೇಳಿಕೆಗಳಿಂದ ಅವರ ಬೆಲೆ ಕಡಿಮೆಯಾಗುತ್ತದೆ. ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ 5 ವರ್ಷ ನಾಪತ್ತೆಯಾಗಿದ್ದರು. ಕ್ಷೇತ್ರದ ಜನರನ್ನು ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿಯಾಗಿಲ್ಲ. ಈಗ ಟಿಕೆಟ್ ಪಡೆಯಲು ಹೆಗಡೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಅವರ ಬೆಲೆ ಕಡಿಮೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಕೂಡ ಅವರಿಗೆ ಇಲ್ಲ ಎಂದು ಟಾಂಗ್ ನೀಡಿದರು. : - – – – - .