ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲೆಟ್ ಮೇಲೆ ಹಲ್ಲೆ. ನವದೆಹಲಿ,ಜನವರಿ,15,2024(..): ಮಂಜಿನಿಂದಾಗಿ ವಿಮಾನ ಹಾರಾಟ ತಡವಾಗಿದ್ದಕ್ಕೆ ಪ್ರಯಾಣಿಕನೊಬ್ಬ ಪೈಲೆಟ್ ಮೇಲೆ ಹಲ್ಲೆ ನಡೆಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ದೆಹಲಿಯ ಇಂದಿರಾಗಾಂಧಿ ಏರ್ ಪೋರ್ಟ್ ನಲ್ಲಿ ಈ ಘಟನೆ ನಡೆದಿದೆ. ಸಾಹಿಲ್ ಕಟಾರಿಯಾ ಎಂಬಾತನೇ ಪೈಲೆಟ್ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕ. ಇಂಡಿಗೋ ಫ್ಲೈಟ್ ನ ಪೈಲೆಟ್ ಮೇಲೆ ಹಲ್ಲೆಯಾಗಿದ್ದು ಇದೀಗ ಪ್ರಯಾಣಿಕ ಸಾಹಿಲ್ ಕಟಾರಿಯಾ ದೂರು ದಾಖಲಾಗಿದೆ. ಮಂಜಿನಿಂದಾಗಿ ಫ್ಲೈಟ್ 13 ಗಂಟೆ ತಡವಾಗಿದ್ದು, ಇದನ್ನು ಹೇಳುತ್ತಿದ್ದ ವೇಳೆ ಪೈಲೆಟ್ ಮೇಲೆ . ಸಾಹಿಲ್ ಕಟಾರಿಯಾ ಹಲ್ಲೆ ಮಾಡಿದ್ದು ಈತನನ್ನು ಅಧಿಕಾರಿಗಳು ಸಿಐಎಸ್ಎಫ್ ಗೆ ವಹಿಸಿದ್ದಾರೆ. : – – – .