ಮುದ್ದಹನುಮೇಗೌಡ ಕಾಂಗ್ರೆಸ್ ಗೆ ಬಂದ್ರೆ ಟಿಕೆಟ್ ಕೇಳುವಂತಿಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರು,ಜನವರಿ,12,2024(..): ಮುದ್ದಹನುಮೇಗೌಡ ಕಾಂಗ್ರೆಸ್ ಗೆ ಬಂದ್ರೆ ನಮ್ಮ ವಿರೋಧವಿಲ್ಲ. ಆದರೆ ಟಿಕೆಟ್ ಕೇಳುವ ಆಗಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಮುದ್ದಹನುಮೇಗೌಡ ನನ್ನನ್ನ ಭೇಟಿ ಮಾಡಿದ್ದರು. ಮುದ್ದಹನುಮೇಗೌಡ ಕಾಂಗ್ರೆಸ್ ಗೆ ಬಂದರೇ ವಿರೋಧಿಸಲ್ಲ. ಕಾಂಗ್ರೆಸ್ ಗೆ ಬಂದರೇ ಟಿಕೆಟ್ ಕೇಳುವ ಆಗಿಲ್ಲ. ಟಕೆಟ್ ನೀಡುವಾಗ ಮಾನದಂಡದ ಪ್ರಕಾರ ನೀಡಲಾಗುತ್ತದೆ ಎಂದರು. ಮೂರು ಹೆಚ್ಚುವರಿ ಡಿಸಿಎಂ ಹುದ್ದೆಗೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ಆ ರೀತಿ ಏನಿಲ್ಲ ಎಐಸಿಸಿ ಅಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಪರಿಸ್ಥಿತಿಯಲ್ಲಿ ಡಿಸಿಎಂ ಮಾಡೋಕೆ ಆಗಲ್ಲ ಎಂದಿದ್ದಾರೆ ಎಂದರು. 2019ರ ಲೋಕಸಭೆ ಟಿಕೆಟ್‌ ವಂಚಿತರಾಗಿದ್ದ ಎಸ್‌.ಪಿ. ಮುದ್ದಹನುಮೇಗೌಡರು ವಿಧಾನಸಭಾ ಚುನಾವಣೆ ವೇಳೆ ಕುಣಿಗಲ್‌ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದಾಗ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿಯಲ್ಲೂ ಟಿಕೆಟ್‌ ನಿರಾಕರಿಸಲಾಗಿತ್ತು. : - – - . .