ಮೂರು ಡಿಸಿಎಂ ಹುದ್ದೆ ಬೇಡಿಕೆ ನಿರಂತರವಾಗಿರುತ್ತೆ- ಸಚಿವ ಕೆ.ಎನ್ ರಾಜಣ್ಣ. ಬೆಂಗಳೂರು,ಜನವರಿ,9,2024(..):ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಠಿ ಬಗ್ಗೆ ಚರ್ಚೆಯಾಗುತ್ತಿದ್ದು ಈ ಕುರಿತು ಸಹಕಾರ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ರಾಜ್ಯದಲ್ಲಿ 3 ಡಿಸಿಎಂ ಹುದ್ದೆ ಸೃಷ್ಠಿಸುವ ಬೇಡಿಕೆ ನಿರಂತರವಾಗಿರುತ್ತೆ. ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದೇವೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಬಹುತೇಕ ಸಚಿವರ ಒಪ್ಪಿಗೆ ಇದೆ ಎಂದರು. ಸಿಎಂ ಹುದ್ದೆಗೆ ಆಕಾಂಕ್ಷಿ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎನ್ ರಾಜಣ್ಣ, ಸಿಎಂ ಆಗುವ ಅವಕಾಶ ಸಿಕ್ಕರೇ ಯಾರಾದ್ರೂ ಬೇಡ ಅಂತಾರ. ಸಿಎಂ ಆಗೋಕೆ ಸಾಕಷ್ಟು ನಾಯಕರಿಗೆ ಆಸೆ ಇದೆ ಎಂದರು. : – - –- – -