ನನಗೆ ಬಿಜೆಪಿಯವರ ಸರ್ಟಿಫಿಕೇಟ್ ಬೇಡ- ಗೃಹ ಸಚಿವ ಪರಮೇಶ್ವರ್ ಟಾಂಗ್ ಬೆಂಗಳೂರು,ಸೆಪ್ಟಂಬರ್,13,2024 (..):ನಾಗಮಂಗಲ ಗಲಭೆ ಕೇಸ್ ಸಣ್ಣ ಘಟನೆ ಎಂದಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾನು ಗೃಹ ಸಚಿವನಾಗಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದೇನೆ ನಮಗೆ ಬಿಜೆಪಿ ನಾಯಕರ ಸರ್ಟಿಫಿಕೇಟ್ ಬೇಡ ಎಂದು ತಿರುಗೇಟು ನೀಡಿದರು. ಜವಾಬ್ದಾರಿ ಇಲ್ಲದೆ ಗೃಹ ಸಚಿವ ಸ್ಥಾನದಲ್ಲಿ ನಾನು ಕುಳಿತಿಲ್ಲ. ನಾನು ಘಟನೆ ಆಗಿದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಘಟನೆ ಸಂಬಂಧ 52 ಮಂದಿಯನ್ನ ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು. : , , , ,