ಕಾನೂನು ಉಲ್ಲಂಘಿಸಿ ನೋಡಿ, ಅರೆಸ್ಟ್ ಮಾಡಿ ತೋರಿಸ್ತೇವೆ- ಬಿಜೆಪಿ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ. ಕಲ್ಬರ್ಗಿ,ಜನವರಿ,6,2024(..):ನಾನು ಕರ ಸೇವಕ ನನ್ನನ್ನೂ ಬಂಧಿಸಿ ಎಂದು ಬಿಜೆಪಿ ನಡೆಸುತ್ತಿರುವ ಅಭಿಯಾನಕ್ಕೆ ಕೌಂಟರ್ ಕೊಟ್ಟ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಉಲ್ಲಂಘಿಸಿ ನೋಡಿ, ಅರೆಸ್ಟ್ ಮಾಡಿ ತೋರಿಸ್ತೇವೆ ಎಂದು ಸವಾಲು ಹಾಕಿದ್ದಾರೆ. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಸರಿ ಧರಿಸಿದ ತಕ್ಷಣ ಆಸ್ತಿ ಪಾಸ್ತಿ ಲೂಟಿ ಮಾಡಬಹುದಾ…?ಕೇಸರಿ ಹಾಕಿದ ತಕ್ಷಣ ಎಲ್ಲಾ ಕೇಸ್ ಖುಲಾಸೆ ಮಾಡಬೇಕಾ..? ಎಂದು ಪ್ರಶ್ನಿಸಿದರು. ಮಟ್ಕಾ ಬುಕ್ಕಿ, ಅಕ್ಕಿ ಕಳ್ಳನಿಗೋಸ್ಕರ ಪ್ರತಿಭಟನೆ‌ ಮಾಡ್ತಿರಾ? ಕಳೆದ ಆರು ತಿಂಗಳಿಂದ ಬಿಜೆಪಿಯವರು ಯಾರಿಗೋಸ್ಕರ ಹೋರಾಟ ಮಾಡ್ತಿದ್ದೀರಾ? ರೈತರ ಪರ ಬೀದಿಗಿಳಿದಿಲ್ಲ, ಕ‌ನ್ನಡಿಗರಿಗೋಸ್ಕರ ಬೀದಿಗಿಳಿದಿಲ್ಲ, ಮಹಿಳೆಯರಿಗೋಸ್ಕರ ಬೀದಿಗಿಳಿದಿಲ್ಲ? ಇಂತಹ ಕ್ರಿಮಿನಲ್‌ ಗಳಿಗೋಸ್ಕರ ಬೀದಿಗಿಳೀತೀರಾ? ಇಷ್ಟು ದಿನ ಇವರ ಮೇಲೆ ಕೇಸ್ ಹಾಕಿದವರು ಯಾರು? ಲಾಂಗ್ ಪೆಂಡಿಂಗ್ ಕೇಸ್ ಯಾಕೆ ಮುಗಿಸಿಲ್ಲ? ಅವಾಗೇನು ಕತ್ತೆ ಕಾಯುತ್ತಿದ್ದರಾ…? ಎಂದು ಗುಡುಗಿದರು. : - – – – –