ಒಂದೊಂದು ಸೀಟು ಮುಖ್ಯ : ಯಾರನ್ನೂ ದೂರವಿಡುವ ಪ್ರಶ್ನೆಯೇ ಇಲ್ಲ- ಮಾಜಿ ಸಚಿವ ಸಿ.ಟಿ ರವಿ. ಚಿಕ್ಕಮಗಳೂರು,ಜನವರಿ,6,2024(..):ಮಾಜಿ ಸಚಿವ ವಿ.ಸೋಮಣ್ಣ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಭೇಟಿಯಾಗಿ ಚರ್ಚಿಸಿದ ವಿಚಾರ ಕುರಿತು ಮಾಜಿ ಶಾಸಕ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ವಿ.ಸೋಮಣ್ಣಗೆ ರಾಜಕೀಯವಾಗಿ ಅವರದ್ದೆ ಆದ ಶಕ್ತಿಯಿದೆ. ವಿ. ಸೋಮಣ್ಣರನ್ನ ನಾನೂ ಕೂಡ ಭೇಟಿ ಮಾಡುವೆ. ಎಲ್ಲಾ ಹಿರಿಯ ನಾಯರಕನ್ನೂ ಭೇಟಿಯಾಗಿ ಸಮಾಲೋಚನೆ ಮಾಡುತ್ತೇವೆ. ಎಂಪಿ ಚುನಾವಣೆಗೆ ಸಕ್ರಿಯಗೊಳಿಸಲು ಜವಾಬ್ದಾರಿ ಇದೆ ಎಂದರು. ಒಂದೊಂದು ಸೀಟು ಮುಖ್ಯ. ಯಾರನ್ನೂ ದೂರವಿಡುವ ಪ್ರಶ್ನೆಯೇ ಇಲ್ಲ. ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಎಲ್ಲಾ ನಾಯಕರನ್ನ ಗೌರವಯುತವಾಗಿ ನಡೆಸಿಕೊಳ್ಳುವಂತೆ ಚರ್ಚೆ ಮಾಡಲಾಗುತ್ತದೆ. ತಪ್ಪು ಸರಿಪಡಿಸಿಕೊಂಡು ಹೋದರೇ ಪಕ್ಷದ ಸಂಘಟನೆ ಉತ್ತಮವಾಗಿರುತ್ತದೆ. ಪಕ್ಷ ಮತ್ತು ನಮ್ಮ ಭವಿಷ್ಯ ಉಜ್ವಲವಾಗುತ್ತೆ ಎಂದು ತಿಳಿಸಿದರು. : .-- - - .