ರಾಜ್ಯದಲ್ಲಿ 1240 ಕೋವಿಡ್ ಸಕ್ರಿಯ ಪ್ರಕರಣ: ಲಸಿಕೆ ನೀಡಲು ನಾವು ಸಿದ್ದ- ಸಚಿವ ದಿನೇಶ್ ಗುಂಡೂರಾವ್. ಬೆಂಗಳೂರು,ಜನವರಿ,5,2024(..):ರಾಜ್ಯದಲ್ಲಿ ಕೊರೋನಾ ಉಪತಳಿ ಕಾಣಿಸಿಕೊಂಡಿದ್ದು, 1240 ಕೋವಿಡ್ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಝ್ಯದಲ್ಲಿ ಕೊರೋನಾ ಸ್ವಲ್ಪ ಹೆಚ್ಚಾಗಿದೆ. ರೋಗ ಲಕ್ಷಣ ಇರುವವರ ಟೆಸ್ಟಿಂಗ್ ಹೆಚ್ಚಳ ಮಾಡಲಾಗಿದೆ. ನಾಳೆಯಿಂದ ಸಹಾಯವಾಣಿ ಆರಂಭಿಸಲಾಗುತ್ತದೆ. ಕೊರೋನಾ ಬಗ್ಗೆ ಗೊಂದಲ ಇದ್ದರೇ ಕಾಲ್ ಮಾಡಬಹದು ಎಂದರು. ಇನ್ನು ನಾವು ಲಸಿಕೆ ನೀಡಲು ಸಿದ್ದರಿದ್ದೇವೆ. ಆದರೆ ಲಸಿಕೆ ಪಡೆಯಲು ಜನ ಮುಂದೆ ಬರುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. : 1240 - – – – -