ಸಿಎಂ ಆರ್ಥಿಕ ಸಲಹೆಗಾರರಾಗಿ ನೇಮಕ: ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ಹೀಗಿತ್ತು. ಬೆಂಗಳೂರು,ಡಿಸೆಂಬರ್,30,2023(..):ತಾವು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕವಾಗಿರುವ ಕುರಿತು ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಬಸವರಾಜ ರಾಯರೆಡ್ಡಿ, ನನಗೆ ಯಾವುದೇ ಅಸಮಾಧಾವಿಲ್ಲ. ಅಸಮಾಧಾನದ ಪ್ರಶ್ನೆಯೇ ಇಲ್ಲ. ಸಿಎಂಗೆ ಆರ್ಥಿಕ ಸಲಹೆಗಾರರು ಬೇಕೆಂದು ನನಗೆ ಹುದ್ದೆ ಕೊಟ್ಟಿದ್ದಾರೆ. ನಮ್ಮ ವರಿಷ್ಠರು, ಸಿಎಂ, ಕೆಪಿಸಿಸಿ ಅಧ್ಯಕ್ಷರು ಈ ಹುದ್ದೆ ನೀಡಿದ್ದಾರೆ. ಈ ಹುದ್ದೆಯನ್ನ ಒಪ್ಪಿಕೊಂಡರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದರು. ಹೀಗಾಗಿ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಸಿಎಂ ಆರ್ಥಿಕ ಸಲಹೆಗಾರರ ಹುದ್ದೆ ನೀಡಿದ್ದಾರೆ. ಇದು ಸವಾಲಿನ ಹುದ್ದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು. : - – - - -