ಈಗಲೇ ಎಚ್ಚೆತ್ತು ಹಿಜಾಬ್ ನಿಷೇಧ ವಾಪಸ್ ನಿರ್ಧಾರ ಕೈಬಿಡಲಿ- ಬಿಎಸ್ ಯಡಿಯೂರಪ್ಪ. ಬೆಂಗಳೂರು,ಡಿಸೆಂಬರ್,23,2023(..):ಹಿಜಾಬ್ ನಿಷೇಧ ಆದೇಶವನ್ನ ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಬಿಎಸ್ ಯಡಿಯೂರಪ್ಪ, ಹಿಜಾಬ್ ನಿಷೇಧ ವಾಪಸ್ ಆದೇಶವನ್ನ ನಾವು ಖಂಡಿಸುತ್ತೇವೆ. ಯಾವ ಮುಸ್ಲೀಂ ನಾಯಕರು ಹೇಳಿದ್ರು. ಹಿಜಾಬ್ ನಿಷೇಧ ವಾಪಸ್ ಪಡೆಯಿರಿ ಅಂತ. ಕೂಡಲೇ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ನಿರ್ಧಾರ ಕೈಬಿಡಿ. ಈಗಲೇ ಎಚ್ಚೆತ್ತು ನಿರ್ಧಾರ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಸರಿಯಾಗಿ ಮಳೆ ಇಲ್ಲದೇ ಬರಗಾಲ ಆವರಿಸಿದೆ ಆದರೆ ಬೇಜವಾಬ್ದಾರಿ ಸರ್ಕಾರ ಬರಪರಿಸ್ಥಿತಿ ಮರೆತಿದೆ ಎಂದು ಕಿಡಿಕಾರಿದರು. : - - – - - .