ಮತ್ತೆ ಒಂದಾದ ಹಳೆಯ ಗೆಳೆಯರು! : ಮೈಸೂರಿನ ಕಾವೇರಿ ಸಮೂಹ ಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ಮೈಸೂರು, ಡಿಸೆಂಬರ್ 22, 2023 (..):ಮೈಸೂರಿನ ಕಾವೇರಿ ಸಮೂಹ ಸಂಸ್ಥೆ ವತಿಯಿಂದ ಹಳೆಯ ವಿದ್ಯಾರ್ಥಿಗಳ ಮೊದಲ ಸಭೆ ಸಂಭ್ರಮದಿಂದ ನಡೆಯಿತು. ಕಾವೇರಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಭಾಗವಾಗಿರುವ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್’ನ ಹಳೆಯ ವಿದ್ಯಾರ್ಥಿಗಳ ಮೊದಲ ಸಭೆ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಸಂಭ್ರಮದಿಂದ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾವೇರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ ಅವರು ಹಳೆಯ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ನೋಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿಗಳು ಒಂದು ಸಂಘವನ್ನು ರಚಿಸಿಕೊಂಡು ಮುಂದಿನ ವರ್ಷಗಳಲ್ಲಿ ಈಗಿನ ವಿದ್ಯಾರ್ಥಿಗಳ ಮತ್ತಷ್ಟು ಪ್ರಗತಿಗೆ ಸಹಕರಿಸುವಂತೆ ಕೋರಿದರು. ಸಂಸ್ಥೆ ಡೀನ್ ಡಾ.ಶ್ರೀಕಂಠಸ್ವಾಮಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳೇ ಬ್ರಾಂಡ್ ಅಂಬಾಸಿಡರ್ ಆಗಬಲ್ಲ ಸಂಸ್ಥೆಗಳ ಶಕ್ತಿ ಎಂದು ಹೇಳಿದರು. ಕಾವೇರಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ಪ್ರಾಂಶುಪಾಲರಾದ ಡಾ.ಅರವಿಂದ್, ಕಾವೇರಿ ಆರೋಗ್ಯ ವಿಜ್ಞಾನ ಸಂಸ್ಥೆಯ ಉಪ ಪ್ರಾಂಶುಪಾಲರಾದ ಪ್ರೊ.ಶಿಮ್ಯಾ ಮತ್ತು ಪ್ರೊ.ಸಂಪಾದ ಹಾಗೂ ಕಾವೇರಿ ಸಮೂಹ ಸಂಸ್ಥೆಗಳ ಎಲ್ಲಾ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯ, ವಿದೇಶಗಳಲ್ಲಿ ನೆಲೆಸಿರುವ ಸಂಸ್ಥೆಯ 200 ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. , , . , . , , , . . , . . . , , , . , , . , . 200 .