ಕಾವೇರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪೋಷಕರಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಮೈಸೂರು, ಡಿಸೆಂಬರ್ 19, 2023 (..): ಮೈಸೂರಿನ ಆಲನಹಳ್ಳಿಯಲ್ಲಿರುವ ಕಾವೇರಿ ಪಿಯು ಕಾಲೇಜಿನಲ್ಲಿ ವಿದ್ಯಾ ಸಾಧನ ಸಂಸ್ಥೆಯಿಂದ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಕೌಶಲ್ಯಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಡಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪೋಷಕರಿಗೆ ವೃತ್ತಿ ಆಯ್ಕೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ನೀಟ್/ಜೆಇಇ/ಸಿಇಟಿ/ಐಐಎಂ(ಐಪಿಮ್ಯಾಟ್)/ಕೆ-ಸಿಇಟಿ ಇತ್ಯಾದಿಗಳ ಬಗ್ಗೆ ಆಳವಾದ ಮಾಹಿತಿ ನೀಡಲಾಯಿತು. ವೈಜ್ಞಾನಿಕ ಫಿಂಗರ್‌ಪ್ರಿಂಟ್ ಬ್ರೈನ್ ಮ್ಯಾಪಿಂಗ್ ಅನಾಲಿಸಿಸ್ ಮತ್ತು ಸೈಕೋಮೆಟ್ರಿಕ್ ಸಾಫ್ಟ್‌ವೇರ್ ಅನಾಲಿಸಿಸ್ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸುವ ವಿಶಿಷ್ಟ ಸಾಧನಗಳ ಬಗ್ಗೆ ಪೋಷಕರಿಗೆ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಚಿತ ವೃತ್ತಿ-ಪ್ರತಿಭೆ ಹೊಂದಾಣಿಕೆ ಕುರಿತ 8 ಪುಟಗಳ ವರದಿಯನ್ನು ನೀಡಲಾಯಿತು. ಅಗತ್ಯ ಮಾಹಿತಿ ನೆರವು ಅಗತ್ಯವಿರುವ 10 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಮತ್ತು ಸೈಕೋಮೆಟ್ರಿಕ್ ವರದಿಯನ್ನು ನೀಡುವ ಭರವಸೆಯನ್ನು ವಿದ್ಯಾ ಸಾಧನಾ ಸಂಸ್ಥೆ ನೀಡಿದೆ. ಆಸಕ್ತರು ಮೊ: 88617 89467 ಸಂಪರ್ಕಿಸಬಹುದಾಗಿದೆ. - , , . . . ///() /- . . - 8 . 10th : 88617 89467