ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ಬಾರಿ 2 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ. ಮೈಸೂರು,ಡಿಸೆಂಬರ್,16,2023(..):ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಭಕ್ತರಿಂದ ಬರೋಬ್ಬರಿ 2.14 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು ಈ ಮೂಲಕ ನಂಜನಗೂಡು ನಂಜುಂಡೇಶ್ವರ ಕೋಟ್ಯಾಧೀಶನಾಗಿದ್ದಾನೆ. ಶ್ರೀಕಂಠೇಶ್ವರ ದೇವಾಲಯದ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 2,14,52,984 ರೂಪಾಯಿ ಕಾಣಿಕೆಯಾಗಿ ಬಂದಿದೆ. 98 ಗ್ರಾಂ 600 ಮಿಲಿ ಗ್ರಾಂ ಚಿನ್ನ, 4 ಕೆಜಿ 500 ಗ್ರಾಂ ಬೆಳ್ಳಿ, 190 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿದೆ. ಶ್ರೀ ನಂಜುಂಡೇಶ್ವರ ಸ್ವಾಮಿ ಚಿಕ್ಕ ಜಾತ್ರಾ ಮಹೋತ್ಸವ ನಡೆದ ಪರಿಣಾಮ. ಈ ಬಾರಿ ಎರಡು ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು, ದೇವಾಲಯದ ಸಿಬ್ಬಂದಿ ಭಾಗಿಯಾಗಿದ್ದರು. : - – – 2 -