ಲೋಕಸಭೆಯಿಂದ ಈವರೆಗೆ 14 ಸಂಸದರು ಅಮಾನತು. ನವದೆಹಲಿ,ಡಿಸೆಂಬರ್,14,2023(..):ಭದ್ರತಾ ವೈಪಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆ 14 ಸಂಸದರನ್ನ ಅಮಾನತು ಮಾಡಲಾಗಿದೆ. ಮೊದಲಿಗೆ ಲೋಕಸಭೆಯಿಂದ ಐವರು ಸಂಸದರು ಅಮಾನತುಗೊಳಿಸಲಾಗಿತ್ತು. ಜ್ಯೋತಿಮಣಿ, ಹೈಬಿ ಈಡನ್ , ಡೀನ್ ಕುರಿಯಾಕೋಸ್ ಸೇರಿ ಐವರನ್ನು ಅಮಾನತು ಮಾಡಲಾಗಿತ್ತು. ನಂತರ 9 ಮಂದಿ ಸಂಸದರನ್ನ ಅಮಾನತು ಮಾಡಲಾಗಿದೆ. ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅವರನ್ನು ಅಮಾನತುಗೊಳಿಸಲಾಗಿದೆ. ಚಳಿಗಾಲ ಅಧಿವೇಶನ ಮುಗಿಯುವವರೆಗೂ 14 ಮಂದಿಯನ್ನ ಅಮಾನತು ಮಾಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಸದಸ್ಯರಿಂದ ರಾಜಕೀಯ ನಿರೀಕ್ಷಿಸುವುದಿಲ್ಲ, ಪಕ್ಷ ರಾಜಕಾರಣ ಮೀರಿ ಕೆಲಸ ಮಾಡಬೇಕು ಎಂದು ಸ್ಪೀಕರ್ ಹೇಳಿದ್ದಾರೆ. : 14 – - – .