ಮೂರು ರಾಜ್ಯಗಳ ಸಿಎಂ ಆಯ್ಕೆಗೆ ವೀಕ್ಷಕರನ್ನ ನೇಮಿಸಿದ ಬಿಜೆಪಿ. ನವದೆಹಲಿ.ಡಿಸೆಂಬರ್,8,2023(..):ಇತ್ತೀಚಿಗೆ ನಡೆದ ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಸಾಧಿಸಿ ಅಧಿಕಾರಕ್ಕೇರುತ್ತಿದ್ದು ಈ ಮಧ್ಯೆ ಮೂರು ರಾಜ್ಯಗಳಿಗೆ ಸಿಎಂ ಆಯ್ಕೆ ಮಾಡಲು ವೀಕ್ಷಕರನ್ನ ನೇಮಿಸಿದೆ. ಚುನಾವಣಾ ಫಲಿತಾಂಶ ಬಂದು ಐದು ದಿನ ಕಳೆದಿದ್ದು ಇನ್ನೂ ಮೂರು ರಾಜ್ಯಗಳಿಗೆ ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಮೂರು ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳ ಆಯ್ಕೆಯಾಗಿ ಇದೀಗ ವೀಕ್ಷಕರನ್ನು ನೇಮಿಸಲಾಗಿದೆ. ರಾಜಸ್ಥಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿನೋದ್ ತಾವಡೆ, ಸರೋಜ್ ಪಾಂಡೆ ಅವರನ್ನು ಮಧ್ಯಪ್ರದೇಶಕ್ಕೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಕೆ ಲಕ್ಷ್ಮಣ್, ಆಶಾ ಲಾಕ್ರಾ, ಛತ್ತೀಸ್ಗಢಕ್ಕೆ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಮತ್ತು ಸರ್ಬಾನಂದ ಸೋನೋವಾಲ್ ಮತ್ತು ದುಷ್ಯಂತ್ ಗೌತಮ್ ವೀಕ್ಷಕರಾಗಿ ನೇಮಕ ಮಾಡಲಾಗಿದೆ. : – - – - –