ಮೌಲ್ವಿಗಳಿಗೆ ಹಣ ಕೊಡ್ತಾರೆ ಅದ್ರೆ ರೈತರಿಗೆ ಕೊಡಲ್ಲ: ಇದು ಕೆಟ್ಟ ಸರ್ಕಾರ- ಆರ್.ಅಶೋಕ್ ವಾಗ್ದಾಳಿ. ಬೆಳಗಾವಿ,ಡಿಸೆಂಬರ್,7,2023(..):ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ. ಮೌಲ್ವಿಗಳಿಗೆ ಹಣ ಕೊಡುತ್ತಾರೆ. ಆದರೆ ರೈತರಿಗೆ ಹಣ ಕೊಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಈ ವೋಟಿಗೋಸ್ಕರವಷ್ಟೆ ಇರೋದು. ರೈತರಿಗೆ ಹಣ ಕೊಡೋಕೆ ಆಗಲ್ಲ. ಮೌಲ್ವಿಗಳಿಗೆ ಕೊಡ್ತಾರೆ. ಮೌಲ್ವಿಗಳಿಗೆ 10 ಸಾವಿರ ರೂ ಹಣ ಕೊಡ್ತಾರೆ. ಫ್ರೀಗೋಸ್ಕರ ದಲಿತರ ಹಣ ದುರ್ಬಳಕೆ ಮಾಡಿಕೊಂಡಿದ್ದೀರಿ. ಗೋಶಾಲೆಗಳನ್ನ ಎಲ್ಲೂ ಓಪನ್ ಮಾಡಿಲ್ಲ ಇರೋದನ್ನ ಮುಚ್ಚುತ್ತಾರೆ. ಮೌಲ್ವಿಗಳಿಗೆ ಕೊಡಲು ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ಓಡಾಡುತ್ತಾರೆ. ಇದು ಒಡೆದು ಆಳುವ ನೀತಿ ಎಂದು ಆರ್.ಅಶೋಕ್ ಕಿಡಿಕಾರಿದರು. : – - -- .