ಶಾಸಕ ಯತ್ನಾಳ್ ಆರೋಪಕ್ಕೆ ತಿರುಗೇಟು: ಐಸಿಸ್ ನಂಟಿನ ಬಗ್ಗೆ ಬಿಜೆಪಿ ಸಾಬೀತು ಮಾಡಲಿ- ಸಿಎಂ ಸಿದ್ದರಾಮಯ್ಯ ಸವಾಲು. ಬೆಳಗಾವಿ,ಡಿಸೆಂಬರ್,7,2023(..):ಮುಸ್ಲೀಂ ಸಮಾವೇಶದಲ್ಲಿ ಸಿಎಂ ವೇದಿಕೆಯಲ್ಲಿ ಐಸಿಸ್ ನಂಟಿರುವ ವ್ಯಕ್ತಿ ಇದ್ದ ಎಂದು ಆರೋಪಿಸಿ ನಿನ್ನೆ ಫೋಟೊ ಬಿಡುಗಡೆ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಸಕ ಯತ್ನಾಳ್ ಒಬ್ಬಮಹಾನ್ ಸುಳ್ಳುಗಾರ. ದ್ವೇಷದ ರಾಜಕಾರಣ ಮಾಡೋದೆ ಯತ್ನಾಳ್ ಕೆಲಸ. ಯತ್ನಾಳ್ ಗೆ ವಿಪಕ್ಷ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದೆ. ಹೀಗಾಗಿ ಹತಾಶಗೊಂಡು ಯತ್ನಾಳ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಯತ್ನಾಳ್ ರಿಂದ ಮುಸ್ಲೀಂ ವಿರೋಧಿ ರಾಜಕಾರಣ. ಕೇಂದ್ರದಲ್ಲಿಅವರದ್ದೆ ಸರ್ಕಾರವಿದೆ ತನಿಖೆ ಮಾಡಲಿ. ಐಸಿಸ್ ನಂಟಿನ ಬಗ್ಗೆ ಬಿಜೆಪಿ ಸಾಬೀತುಪಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು. : - - – - .