ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್: ಕ್ರಮ ಕೈಗೊಳ್ಳದ ಅಧಿಕಾರಿಗಳು… ಮೈಸೂರು,ಡಿ,5,2023(..):ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್ ತಲೆ ಎತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮೈಸೂರಿನ ಗೋಕುಲಂ ಬಡಾವಣೆ ವಾರ್ಡ್ ನಂ 6 ನಿರ್ಮಲಾ ಕಾನ್ವೆಂಟ್ ಬಳಿ ಹೋಟೆಲ್ ನಿರ್ಮಾಣವಾಗಿದ್ದು ಪ್ರಾರಂಭಕ್ಕೆ ಸಜ್ಜಾಗಿದೆ. ರಾಜಾ ಕಾಲುವೆ ಮೇಲೆ ಹೋಟೆಲ್ ನಿರ್ಮಾಣವಾಗಿದ್ದರೂ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈಗಾಗಲೇ ಕಟ್ಟಡದ ಮಾಲೀಕ ಬಾಡಿಗೆ ಫಿಕ್ಸ್ ಮಾಡಿ ಹೋಟೆಲ್ ನಡೆಸಲು ಅನುಮತಿ ನೀಡಿದ್ದಾನೆ. ಆದರೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. : - –