ಮೈಸೂರಿನ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು. ಮೈಸೂರು,ಡಿಸೆಂಬರ್,5,2023(..):ಕಾಲೇಜು ವಿದ್ಯಾರ್ಥಿಯೊಬ್ಬ ಪ್ಲಾಸ್ಟಿಕ್ ಕವರ್ ನಿಂದ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರಿನ ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆ () ಸಂಸ್ಥೆಯ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಅಕ್ಷಜ್ ಮೃತ ವಿದ್ಯಾರ್ಥಿ. ಶಿಕ್ಷಣ ಸಂಸ್ಥೆಯ ವಸತಿ ಗೃಹ-ಕಾವೇರಿ ಬ್ಲಾಕ್ ನ ರೂಂ ನಂ.11ರಲ್ಲಿ ಇಂದು ಸಂಜೆ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿ ಮೂಲತಃ ಹೈದರಾಬಾದ್ ನಿವಾಸಿ. ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಶಂಕಿಸಲಾಗಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಯ ಕಾಲಲ್ಲಿ ಬ್ಲೇಡಿನಿಂದ ಕುಯ್ದುಕೊಂಡ ಹಳೆಯ ಗಾಯದ ಕಲೆಗಳು ಪತ್ತೆಯಾಗಿವೆ. ನೋಡಲು ದೃಢಕಾಯನಾದ ಈ ವಿದ್ಯಾರ್ಥಿ ಪ್ಲಾಸ್ಟಿಕ್ ಕವರ್ ನಿಂದ ಮುಖ ಸುತ್ತಿಕೊಂಡು ಅದನ್ನು ಕತ್ತಿಗೆ ಬಿಗಿಯಾಗಿ ಕಟ್ಟಿ ಉಸಿರು ಕಟ್ಟಿಸಿಕೊಂಡು( ) ಮೃತಪಟ್ಟರುವುದು ಹಲವು ಶಂಕೆಗೆ ಎಡೆ ಮಾಡಿದೆ. : - - -