ನನ್ನ ಆನೆಯನ್ನ ಬದುಕಿಸಿಕೊಡಿ- ಅರ್ಜುನನ್ನು ನೆನೆದು ಕಣ್ಣೀರಿಟ್ಟು ಗೋಳಾಡಿದ ಮಾವುತ ಮೈಸೂರು,ಡಿಸೆಂಬರ್,5,2023(..);ನಿನ್ನೆ ಕಾಡಾನೆ ಕಾರ್ಯಾಚರಣೆ ವೇಳೆ ಕಾದಾಟದಲ್ಲಿ ಮೃತಪಟ್ಟ ಅರ್ಜುನ ಆನೆಯನ್ನ ನೆನೆದು ಮಾವುತ ವಿನು ಕಣ್ಣೀರಿಟ್ಟಿದ್ದಾರೆ. ಅಂತಿಮ ದರ್ಶನದ ವೇಳೆ ಮಾವುತ ವಿನು ಅರ್ಜುನ ಆನೆಯನ್ನ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದು, ನನ್ನ ಆನೆಯನ್ನ ಬದುಕಿಸಿಕೊಡಿ. ನನ್ನನ್ನೂ ಅರ್ಜುನನ ಜೊತೆ ಮಣ್ಣು ಮಾಡಿ. ನನ್ನ ಆನೆಯನ್ನ ಮೈಸೂರಿಗೆ ಕಳುಹಿಸಿಕೊಡಿ ಅರ್ಜುನ ಸತ್ತಿಲ್ಲ ಎಂದು ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ ಎಂದು ಕಣ್ಣೀರಿಟ್ಟರು. ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪ ನೆಡು ತೋಪಿನಲ್ಲಿ ಸರಕಾರಿ ಗೌರವದೊಂದಿಗೆ ಅರ್ಜುನನ ಅಂತ್ಯಸಂಸ್ಕಾರ ನೆರವೇರಲಿದೆ. : – - – -