ದೇಶ ವಿರೋಧಿ ಚಟುವಟಿಕೆಯಲ್ಲಿ ರಾಜಕಾರಣ ಬೇಡ-ಪರಿಷತ್ ಸದಸ್ಯ ಸಿ.ಟಿ ರವಿ ಬೆಂಗಳೂರು,ಸೆಪ್ಟಂಬರ್,10,2024 (..):ಉಗ್ರರು ರಾಜ್ಯ ಬಿಜೆಪಿ ಕಚೇರಿ ಸ್ಪೋಟಿಸಲು ಸಂಚು ರೂಪಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ದೇಶ ವಿರೋಧಿ ಚಟುವಟಿಕೆಯಲ್ಲಿ ರಾಜಕಾರಣ ಮಾಡಬಾರದು ಎಂದಿದ್ದಾರೆ. ಈ ಕುರಿತು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಬಿಜೆಪಿ ಕಚೇರಿ ಬ್ಲಾಸ್ಟ್ ಗೆ ಸಂಚು ಸಂಬಂಧ, ಉಗ್ರರ ಕೃತ್ಯದ ಬಗ್ಗೆ ಚಾರ್ಜ್ ಶೀಟ್ ಬಂದಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ರಾಜಕಾರಣ ಮಾಡಬೇಡಿ ಉಗ್ರರು ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಿಸಿದ್ರು ಇದನ್ನು ಮಲ್ಲಿಕಾರ್ಜುನ ಖರ್ಗೆ ಸಿಲಿಂಡರ್ ಬ್ಲಾಸ್ಟ್ ಎಂದರು. ಪಾಕ್ ಪರ ಘೋಷಣೆ ಕೂಗಿದರೂ ಕೂಗಿಲ್ಲ ಎಂದರು. ಹೀಗಾಗಿ ದೇಶ ವಿರೋಧಿ ಚಟುವಟಿಕೆಯಲ್ಲಿ ರಾಜಕಾರಣ ಮಾಡೋದು ಬೇಡ ಎಂದರು. : , , , ,