ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ. ಬೆಂಗಳೂರು,ಡಿಸೆಂಬರ್,1,2023(..):ವಾಣಿಜ್ಯ ಬಳಕೆಯ 19 ಕೆಜಿ ಎಲ್‌ ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನ 21 ರೂ. ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆ ಬಳಿಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1775.50 ರೂ.ನಿಂದ 1796.50 ರೂ.ಗೆ ಹೆಚ್ಚಳವಾದಂತಾಗಿದೆ. ಈ ಹಿಂದೆ ನವೆಂಬರ್ 16 ರಂದು ಅದರ ಬೆಲೆ ಕಡಿತಗೊಂಡು 1775.50 ರೂ. ಆಗಿತ್ತು. ಇಂದಿನಿಂದ ಮುಂಬೈನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1749 ರೂ., ಕೋಲ್ಕತ್ತಾದಲ್ಲಿ 1885.50 ರೂ., ಚೆನ್ನೈನಲ್ಲಿ 1968.50 ರೂ. ಆಗಿದೆ. : – - -