ಜನತಾದರ್ಶನ: ಮಧ್ಯಾಹ್ನ 3 ಗಂಟೆ ವೇಳೆಗೆ 1805 ಅರ್ಜಿಗಳ ಸ್ವೀಕಾರ. ಬೆಂಗಳೂರು,ನವೆಂಬರ್,27,2023(..):ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸುತ್ತಿದ್ದು ಜನರ ಸಮಸ್ಯೆಗಳನ್ನ ಆಲಿಸಿ ಪರಿಹಾರಕ್ಕೆ ಸೂಚನೆ ನೀಡುತ್ತಿದ್ದಾರೆ. ಜನತಾ ದರ್ಶನಕ್ಕೆ ಸಮಸ್ಯೆ ಹೊತ್ತ ಜನಸಾಗರ ಹರಿದು ಬರುತ್ತಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟು 1805 ಅರ್ಜಿಗಳನ್ನ ಸಿಎಂ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ. ಈ ಪೈಕಿ 37 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ. 1070 ಅರ್ಜಿಗಳ ಇತ್ಯರ್ಥ ಬಾಕಿ ಇದೆ. ಜನತಾ ದರ್ಶನಕ್ಕಾಗಿ ವಿಶೇಷ ಚೇತನರು, ಹಿರಿಯ ನಾಗರಿಕರು ಸೇರಿದಂತೆ 20 ಕೌಂಟರ್ ​ಗಳನ್ನ ಮಾಡಲಾಗಿದೆ. 1000ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ. ಇಂದು, ಮೊದಲಿಗೆ ವಿಶೇಷ ಚೇತನರ ಕೌಂಟರ್​ ಬಳಿ ತೆರಳಿದ ಸಿಎಂ ಸಿದ್ದರಾಮಯ್ಯ ಅಲ್ಲಿ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದರು. : - -1805 - – 3 .