ಆಸ್ಕರ್’ಗೆ ನಾಮನಿರ್ದೇಶನಗೊಂಡ ‘12th ಫೇಲ್’ ಬಾಲಿವುಡ್ ಚಿತ್ರ ಬೆಂಗಳೂರು, ನವೆಂಬರ್ 26, 2023 (..):ವಿಧು ವಿನೋದ್ ಚೋಪ್ರಾ ನಿರ್ದೇಶನದ ’12ನೇ ಫೇಲ್’ ಚಿತ್ರವು ಸ್ವತಂತ್ರವಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. 12 ನೇ ಫೇಲ್ 2023 ರ ಭಾರತೀಯ ಹಿಂದಿ ಭಾಷೆಯ ಜೀವನಚರಿತ್ರೆ ನಾಟಕ ಚಿತ್ರವಾಗಿದ್ದು, ವಿಧು ವಿನೋದ್ ಚೋಪ್ರಾ ನಿರ್ಮಿಸಿ, ಬರೆದು ನಿರ್ದೇಶಿಸಿದ್ದಾರೆ. ಈ ಕುರಿತು ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಮಾಹಿತಿ ನೀಡಿದ್ದು, ’12ನೇ ಫೇಲ್’ ಚಿತ್ರವು ಸ್ವತಂತ್ರವಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ ಎಂದು ತಿಳಿಸಿದ್ದಾರೆ. ’12th ಫೇಲ್’ ಅಕ್ಟೋಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.