ಸಿಎಂ ನಿವಾಸದ ಬಳಿ ಪಿಎಸ್ ಐ ಹುದ್ದೆ ಪರೀಕ್ಷಾ ಅಭ್ಯರ್ಥಿಗಳಿಂದ ಪ್ರತಿಭಟನೆ. ಬೆಂಗಳೂರು,ನವೆಂಬರ್,27,2023(..):545 ಪಿಎಸ್ ಐ ಹುದ್ದೆಗಳಿಗೆ ಸರ್ಕಾರ ಮರು ಪರೀಕ್ಷೆಗೆ ಕೇವಲ ಒಂದು ತಿಂಗಳು ಕಾಲಾವಕಾಶ ನೀಡಿರುವ ಹಿನ್ನೆಲೆ ಅಭ್ಯರ್ಥಿಗಳು ಇಂದು ಸಿಎಂ ನಿವಾಸ ಗೃಹ ಕಚೇರಿ ಕೃಷ್ಣಾ ಬಳಿ ಪ್ರತಿಭಟನೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಜನತಾದರ್ಶನ ನಡೆಸಲಿದ್ದು ಇದಕ್ಕೂ ಮುನ್ನ ಪ್ರತಿಭಟನೆಯ ಬಿಸಿ ತಟ್ಟಿದೆ. ಪಿಎಸ್ ಐ ಹುದ್ದೆ ಪರೀಕ್ಷಾ ಅಭ್ಯರ್ಥಿಗಳು ಸಿಎಂ ನಿವಾಸದಲ್ಲಿ ಧರಣಿ ನಡೆಸಿದ್ದು ಪರೀಕ್ಷೆಗೆ ಕೇವಲ 30 ದಿನ ಕಾಲಾವಕಾಶ ನೀಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬರಲು ನಮ್ಮ ಪಾತ್ರ ದೊಡ್ಡದು. ಕನಿಷ್ಟ ಎರಡು ತಿಂಗಳಾದರೂ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತ ಅಭ್ಯರ್ಥಿಗಳನ್ನ ವಶಕ್ಕೆ ಪಡೆದಿದ್ದಾರೆ. : – - – -.