ನಟ ದರ್ಶನ್ ಫೋಟೊ ಬಿಡುಗಡೆ ಹಿಂದೆ ಜೋಶಿಯವರ ಕೈವಾಡ ಇರಬೇಕು-ಸಚಿವ ಸಂತೋಷ್ ಲಾಡ್ ಬೆಂಗಳೂರು,ಸೆಪ್ಟಂಬರ್,10,2024 (..):ಮುಡಾ ಹಗರಣ ಡೈವರ್ಟ್ ಮಾಡಲು ನಟ ದರ್ಶನ್ ಫೋಟೊ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಸಂತೋಷ್ ಲಾಡ್, ನನ್ನ ಪ್ರಕಾರ ದರ್ಶನ್ ಫೋಟೊ ಬಿಡುಗಡೆ ಹಿಂದೆ ಪ್ರಹ್ಲಾದ್ ಜೋಶಿಯವರ ಕೈವಾಡ ಇರಬೇಕು ಪ್ರಹ್ಲಾದ್ ಜೋಶಿ ಅವರಿಗೆ ಬಹಳಷ್ಟು ಮಾಹಿತಿ ಇದೆ. ಮುಡಾ ಹಗರಣ ಯಾಕೆ ಡೈವರ್ಟ್ ಮಾಡಬೇಕು. ಮುಡಾ ಹಗರಣದಲ್ಲಿ ಸೈಟ್ ಕೊಟ್ಟವರು ಯಾರು..? ಎಸ್ ಸಿ, ಎಸ್ ಟಿ ಜಮೀನು ಎಂಬುದಕ್ಕೆ ದಾಖಲೆ ಇದೆಯಾ? ರಫೆಲ್, ಚುನವಣಾ ಬಾಂಡ್ ಬಗ್ಗೆ ಮಾತನಾಡಬೇಕಲ್ವಾ? ಎಂದು ಟಾಂಗ್ ಕೊಟ್ಟರು. ಕರ್ನಾಟಕಕ್ಕೆ ಪ್ರಹ್ಲಾದ್ ಜೋಶಿ ಬಿಜೆಪಿ ಕೊಡುಗೆ ಏನು? ಗೋವಾಗೆ ಪವರ್ ಲೈನ್ ಹಾಕಲು ಅನುಮತಿ ನೀಡಿದ್ರು. ಮಹಾದಾಯಿ ಯೋಜನೆಗೆ ಕ್ಲಿಯರೆನ್ಸ್ ಕೊಡಲಿಲ್ಲ ಸರ್ವ ಪಕ್ಷ ನಿಯೋಗ ಹೋದಾಗ ಇವರು ಏನು ಮಾಡಿದ್ರು ಎಂದು ಸಂತೋಷ್ ಲಾಡ್ ಕಿಡಿಕಾರಿದರು. : , ’ , ,