ಸಿದ್ದರಾಮಯ್ಯಗೆ ನೈತಿಕತೆ ಇದ್ದರೇ ರಾಜೀನಾಮೆ ನೀಡಲಿ- ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹ ಬೆಂಗಳೂರು,ನವೆಂಬರ್,24,2023(..):ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆಗೆ ನೀಡಿದ ಅನುಮತಿ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಗೋವಿಂದ ಕಾರಜೋಳ, ಇದು ಸರ್ಕಾರದ ಸಂವಿಧಾನ ಬಾಹಿರ ತೀರ್ಮಾನ ನೈತಿಕತೆ ಇದ್ದರೇ ಸಿಬಿಐ ತನಿಖೆ ವರದಿ ಬರುವ ತನಕ ಕಾಯಬೇಕಿತ್ತು. ಯಾರ ಒತ್ತಡಕ್ಕೆ ಮಣಿದು ಈ ನಿರ್ಧಾರ ಮಾಡಿದ್ದಾರೆ ಎಂಬುದನ್ನ ಬಹಿರಂಗಪಡಿಸಬೇಕು. ಸೋನಿಯಾ ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದ್ರಾ..? ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. : - – - -