ಡಿಕೆ ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಗೆ ಅನುಮತಿ ವಾಪಸ್ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ ಬೆಂಗಳೂರು,ನವೆಂಬರ್,24,2023(..):ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಗೆ ಅನುಮತಿ ವಾಪಸ್ ಪಡೆದ ವಿಚಾರವನ್ನ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರು ಕಾನೂನಿನ ಪ್ರಕಾರ ತನಿಖೆಯನ್ನ ಸಿಬಿಐಗೆ ನೀಡಿಲ್ಲ. ಡಿಕೆ ಶಿವಕುಮಾರ್ ವಿರುದ್ದ ತನಖೆಗೆ ಸ್ಪೀಕರ್ ರಿಂದ ಅನುಮತಿ ಪಡೆಯಬೇಕಿತ್ತು . ತನಿಖೆಗೆ ಸ್ಪೀಕರ್ ಅನುಮತಿ ಕೊಡಬೇಕಿತ್ತು . ಆದರೆ ಅಂದು ತನಿಖೆಗೆ ಸ್ಪೀಕರ್ ಅನುಮತಿ ನೀಡಿಲ್ಲ ಹೀಗಾಗಿ ತನಿಖೆಗೆ ಅನುಮತಿ ವಾಪಸ್ ಪಡೆಯಲಾಗಿದೆ ಎಂದರು. : - - - – - –